ಕರ್ನಾಟಕ

karnataka

ETV Bharat / state

ಗೋನೂರು ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ - ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನ್ಯೂಸ್

ಗೋನೂರು ಕೆರೆಗೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಬಾಗಿನ ಅರ್ಪಿಸಿ, ಎರಡು ವರ್ಷ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಹರ್ಷ ವ್ಯಕ್ತಪಡಿಸಿದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

By

Published : Aug 27, 2020, 4:35 PM IST

ಚಿತ್ರದುರ್ಗ: ತಾಲೂಕಿನ ಗೋನೂರು ಕೆರೆ ಐದು ವರ್ಷಗಳಲ್ಲಿ ಮೂರು ಬಾರಿ ತುಂಬಿದ್ದು, ಸುತ್ತಲಿನ ರೈತರಿಗೆ ಸಂತಸ ಉಂಟಾಗಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.

ಗೋನೂರು ಕೆರೆ ಕೋಡಿಬಿದ್ದ ಹಿನ್ನೆಲೆಯಲ್ಲಿ ಇಂದು ಗ್ರಾಮಸ್ಥರೊಂದಿಗೆ ಬಾಗಿನ ಅರ್ಪಿಸಿ ನಂತರ ಮಾತನಾಡಿದ‌ ಅವರು, ಈ ವರ್ಷ ಚಿತ್ರದುರ್ಗ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಶೇ 80 ರಷ್ಟು ಚೆಕ್‍ಡ್ಯಾಂಗಳು ಭರ್ತಿಯಾಗಿವೆ. ಜೊತೆಗೆ ಶೇ.100 ರಷ್ಟು ಬಿತ್ತನೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಚಿತ್ರದುರ್ಗದ ಮೇಲುದುರ್ಗದಲ್ಲಿ ಉತ್ತಮ ಮಳೆಯಾದರೆ ಅಲ್ಲಿಂದ ಹರಿಯುವ ನೀರು ಮೊದಲು ಕೋಟೆಯ ಗೋಪಾಲಸ್ವಾಮಿ ಹೊಂಡ, ಅಕ್ಕ ತಂಗಿ ಹೊಂಡ, ಚಂದ್ರವಳ್ಳಿ ಕೆರೆ, ಸಿಹಿ ನೀರು ಹೊಂಡ ತುಂಬಿದ ನಂತರ ಸಂತೆ ಹೊಂಡದ ಮೂಲಕ ಮಲ್ಲಾಪುರ ಕೆರೆ ಮತ್ತು ಗೋನೂರು ಕೆರೆ ಸೇರುತ್ತದೆ. ಇಲ್ಲಿಂದ ನಂತರ ದ್ಯಾಮವ್ವನಹಳ್ಳಿ, ಕಲ್ಲಹಳ್ಳಿ ಕೆರೆ, ಸಾಣಿಕೆರೆ, ರಾಣಿಕೆರೆಗೆ ಸೇರಿ ನಂತರ ಆಂಧ್ರಪ್ರದೇಶಕ್ಕೆ ಸೇರುತ್ತದೆ. ಹೀಗೆ ಒಂದಕ್ಕೊಂದು ಸಂಪರ್ಕ ಇರುವಂತೆ ಜಿಲ್ಲೆಯ ಹಿರಿಯರು ಕೆರೆಗಳನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು.

ABOUT THE AUTHOR

...view details