ಚಿತ್ರದುರ್ಗ: ರಾಜ್ಯದಲ್ಲಿ ನಾವೇ ಮಂತ್ರಿಗಿರಿ ಕೊಡುವ ಯೋಗ ಬರಲಿದೆ ಎಂದು ಚಿತ್ರದುರ್ಗದಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಓದಿ: ರಾಜ್ಯ ಆರೋಗ್ಯ ಇಲಾಖೆಯಿಂದ ಹೊಸ ಕೋವಿಡ್ ಮಾರ್ಗಸೂಚಿ ಬಿಡುಗಡೆ
ಪಂಚಮಸಾಲಿ ಸಮುದಾಯಕ್ಕೆ ಪಾದಯಾತ್ರೆ ನೀಡುವಂತೆ ಒತ್ತಾಯಿಸಿ ಕೋಟೆನಾಡಿನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಶಾಸಕ ಯತ್ನಾಳ್, ನನ್ನ ಬಗ್ಗೆ ದೆಹಲಿಗೆ ಹೋಗಿ ಯಾರು ಏನೇ ಹೇಳಿದರೂ ಏನೂ ಆಗಲ್ಲ. ನಾನು ಏನು ಎಂಬುದು ಕೇಂದ್ರ ನಾಯಕರಿಗೆ ಗೊತ್ತಿದೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗುವವರಿಗೂ ಹೋರಾಟ ಮಾಡುತ್ತೇನೆ ಎಂದರು.
ಇತ್ತ ಪಂಚಮಸಾಲಿ ಶ್ರೀಗಳು ಬಿಸಿಲಲ್ಲಿ ಪಾದಯಾತ್ರೆ ಹೊರಟರೂ ಸಿಎಂ ಮಾತಾಡಿಲ್ಲ. ಈ ಬಗ್ಗೆ ನಾವು ಸದನದಲ್ಲಿ ಪ್ರಸ್ತಾಪಿಸಿದ ಬಳಿಕ ಸಭೆ ಕರೆದರು. ಇಂದಿನ ಸದನದಲ್ಲಿ ಬಾವಿಗಿಳಿದು ನಾವು 2ಎ ಮೀಸಲಾತಿಗಾಗಿ ಧರಣಿ ಮಾಡಿದೆವು. ನಮ್ಮ ಸಮುದಾಯದ ನಾಯಕರಿಗೆ ಸಿಎಂ ಊಟ, ನಾಷ್ಟ ಮಾಡಿಸುವುದರಿಂದ ನಮ್ಮ ಬೇಡಿಕೆ ಈಡೇರಲ್ಲ. ನಾನು ಶಾಸಕ, ಸಂಸದ ಹೇಗೆ ಆಗಬೇಕೆಂದು ನಮಗೆ ಗೊತ್ತಿದೆ ಎಂದು ಪರೋಕ್ಷವಾಗಿ ಸ್ವ ಪಕ್ಷದ ನಾಯಕರಿಗೆ ಟಾಂಗ್ ನೀಡಿದರು.
ನಮ್ಮನ್ನು ಹೊರಗೆ ಪಕ್ಷದಿಂದ ಹಾಕಿದರೂ ಮತ್ತೇ ಚುನಾಯಿತರಾಗುತ್ತೇವೆ. ಪಕ್ಷದೊಳಗಿದ್ದರು ಗೆಲ್ಲುತ್ತೇವೆ, ಇಲ್ಲವಾದರೂ ಆರಿಸಿ ಬರುತ್ತೇವೆ. ಪಕ್ಷೇತರವಾಗಿ ವಿಧಾನ ಪರಿಷತ್ಗೆ ಗೆದ್ದು ಬಂದಿದ್ದೇ ಎಂದರು. ಇನ್ನು ಶಾಸಕರ ಮನೆಯ ಮುಂಭಾಗದಲ್ಲಿ ಪಂಚಮಸಾಲಿ ಸಮುದಾಯದ ಜನ ಧರಣಿ ಮಾಡಿ ಸಮಾಜದ ಶಕ್ತಿ ತೋರಿಸಬೇಕಿದೆ ಎಂದು ಸಮುದಾಯದ ಜನತೆ ಕರೆ ನೀಡಿದರು.
ಇನ್ನು ಶಿವಮೊಗ್ಗ, ಶಿಕಾರಿಪುರ, ಭದ್ರಾವತಿ ಕ್ಷೇತ್ರಗಳಲ್ಲಿ ನಮ್ಮ ಸಮಾಜ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಜನ ಸಂಖ್ಯೆ ಸೇರಬೇಕಿದೆ. ದೊಡ್ಡ ಮಟ್ಟದ ಸಮಾವೇಶ ಮಾಡಬೇಕಿದೆ ಎಂದು ಪರೋಕ್ಷವಾಗಿ ಸಿಎಂಗೆ ಟಾಂಗ್ ನೀಡಿದರು.
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕಲ್ಪಿಸುವ ವಿಚಾರವಾಗಿ ಎರಡು ಸಲ ಭರವಸೆ ನೀಡಿ ಟಾಂಗ್ ಕೊಟ್ಟಿದ್ದೀರಿ. ಈ ಭಾರಿ ಬಿಡಲ್ಲ ಎಂದು ಸಿಎಂಗೆ ಹೇಳಿದ್ದೇನೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಿದ ಬಳಿಕವೇ ಮೀಟಿಂಗ್ ಬರುತ್ತೇನೆ ಎಂದು ಸಿಎಂಗೆ ಹೇಳಿದ್ದೇನೆ. ಅಲ್ಲಿಯವರಿಗೂ ಸಮುದಾಯದ ಹೋರಾಟ ನಿಲ್ಲಿಸುವುದಿಲ್ಲ ಎಂದು ಶಾಸಕ ಯತ್ನಾಳ ಚಿತ್ರದುರ್ಗ ಪಂಚಮಸಾಲಿ ಸಮಾವೇಶಲ್ಲಿ ಮಾತನಾಡಿದರು.