ಕರ್ನಾಟಕ

karnataka

ETV Bharat / state

ಪ್ರೀತಿಯ ಬಲೆಗೆ ಬಿದ್ದ ಅಪ್ರಾಪ್ತ ಮಗ, ಬುದ್ದಿ ಹೇಳಿದ್ದಕ್ಕೆ ತಂದೆಯನ್ನೇ ಕೊಚ್ಚಿ ಕೊಲೆಗೈದ! - ಕತ್ತು ಕುಯ್ದು ಬಿಲ್ ಕಲೆಕ್ಟರ್ ಕೊಲೆ

ಕತ್ತು ಕುಯ್ದು ಬಿಲ್ ಕಲೆಕ್ಟರ್​ನ ಕೊಲೆ ಮಾಡಿದ್ದ ಪ್ರಕರಣ ತಿರುವು ಪಡೆದುಕೊಂಡಿದ್ದು ಅಪ್ರಾಪ್ತ ಮಗನೇ ತಂದೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ!

ಅಪ್ರಾಪ್ತ ಮಗನಿಂದಲೇ ತಂದೆಯ ಬರ್ಬರ ಹತ್ಯೆ

By

Published : Sep 25, 2019, 1:34 PM IST

ಚಿತ್ರದುರ್ಗ:ಮಲಗಿದ್ದ ವೇಳೆ ಕತ್ತು ಕುಯ್ದು ಬಿಲ್ ಕಲೆಕ್ಟರ್ ಕೊಲೆ ಮಾಡಿದ್ದ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ!

ಕೊಲೆಯಾದಎನ್​.​ಬಿ ಜಯಪ್ಪ(48) ಅವರನ್ನು ತನ್ನ ಅಪ್ರಾಪ್ತ ಮಗನೇ ಮಚ್ಚಿನಿಂದ ಕೊಚ್ಚಿ ಕೊಲೆಗೈದಿರುವುದು ಗೊತ್ತಾಗಿದೆ. 17 ವರ್ಷದ ಹುಡುಗ ಸರಿಯಾದ ವಯಸ್ಸಿಗೆ ಬರುವ ಮುನ್ನವೇ ಪ್ರೀತಿಯ ಬಲೆಗೆ ಬಿದ್ದಿದ್ದಾನೆ ಎಂದು ತಿಳಿದ ತಂದೆ ಆತನಿಗೆ ಬುದ್ಧಿ ಹೇಳಿದ್ದರಂತೆ. ಆದರೆ, ತಿಳಿ ಹೇಳಿದ್ದಕ್ಕೆ ಕೋಪಗೊಂಡ ಪಾಪಿ ಮಗ, ತಂದೆಯನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಆರ್​ಡಿ ಕಾವಲು(ಹೊಸೂರು) ಗ್ರಾಮದಲ್ಲಿ ತಡರಾತ್ರಿ ಈ ಘಟನೆ ನಡೆದಿತ್ತು. ಕೊಲೆಯಾದ ಎನ್​.​ಬಿ ಜಯಪ್ಪ ತುಪ್ಪದಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಬಿಲ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು.

ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details