ಕರ್ನಾಟಕ

karnataka

ETV Bharat / state

ವ್ಯಾಕರಣ ಮೇಸ್ಟ್ರು ಬಹುವಚನ ಕಲ್ತಿಲ್ಲ: ಸಿದ್ದರಾಮಯ್ಯಗೆ ಸುರೇಶ್​ ಕುಮಾರ್​​ ಟಾಂಗ್​​ - ಸುರೇಶ್ ಕುಮಾರ್ ಪ್ರತಿಕ್ರಿಯೆ

ಸಿದ್ದರಾಮಯ್ಯ ವ್ಯಾಕರಣ ಮೇಸ್ಟ್ರು. ಆದ್ರೂ ಅವರಿಗೆ ವ್ಯಾಕರಣ ಬರೋದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ವ್ಯಾಕರಣ ಮೇಸ್ಟ್ರು ಬಹು ವಚನ ಕಲ್ತಿಲ್ಲ: ಸುರೇಶ್ ಕುಮಾರ್ ವ್ಯಂಗ್ಯ

By

Published : Oct 26, 2019, 12:15 PM IST

ಚಿತ್ರದುರ್ಗ: ಸಿದ್ದರಾಮಯ್ಯ ವ್ಯಾಕರಣ ಮೇಸ್ಟ್ರು. ಆದ್ರೂ ಅವರಿಗೆ ವ್ಯಾಕರಣ ಬರೋದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ವ್ಯಾಕರಣ ಮೇಸ್ಟ್ರು ಬಹುವಚನ ಕಲ್ತಿಲ್ಲ: ಸುರೇಶ್ ಕುಮಾರ್ ವ್ಯಂಗ್ಯ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹೊಸಯಳನಾಡು ಗ್ರಾಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯಗೆ ವ್ಯಾಕರಣ ಬರೋದಿಲ್ಲ. ಅವರು ಬಹುವಚನ ಕಲ್ತಿಲ್ಲ. ಕಲಿತಿರುವುದು ಏಕವಚನ ಮಾತ್ರ. ಹಾಗಾಗಿ ಸ್ಪೀಕರ್​ಗೆ ಏಕವಚನದಲ್ಲಿ ಮಾತಾಡ್ತಾರೆ ಎಂದು ಕಿಡಿಕಾರಿದರು. ಇನ್ನು ಆರ್​ಸಿ‌ಇಪಿ ಟ್ರೇಡ್ ಅಗ್ರಿಮೆಂಟ್ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಟ್ರೇಡ್ ಬಗ್ಗೆ ನಮ್ಮ ವಿರೋಧವೂ ಇದೆ. ರೈತರಿಗೆ ಅನ್ಯಾಯ ಆಗೋದಕ್ಕೆ ನಾವು ಬಿಡೋದಿಲ್ಲ. ರೈತರ ಪರವಾಗಿ ಇರ್ತಿವಿ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡ್ತೀವಿ ಎಂದು ಸಚಿವ ಸುರೇಶ್‌ ಕುಮಾರ್ ಕೇಂದ್ರ ಸರ್ಕಾರದ ನಿಲುವನ್ನು ವಿರೋಧಿಸಿದರು.

ಇನ್ನು ಅನರ್ಹ ಶಾಸಕರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅನರ್ಹ ಶಾಸಕರ ಕುರಿತು ಸುಪ್ರೀಂ ಜೆಡ್ಜ್​ಮೆಂಟ್​ಗಾಗಿ ಕಾಯುತ್ತಿದ್ದೇವೆ. ಜೆಡ್ಜ್​ಮೆಂಟ್ ಬಂದ ಮೇಲೆ ನಮ್ಮ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ABOUT THE AUTHOR

...view details