ಚಿತ್ರದುರ್ಗ :ಅಧಿಕಾರ ಕೈ ಜಾರಿದ ಮೇಲೆ ಸಿದ್ಧರಾಮಯ್ಯ ಅವರ ಮತಿಭ್ರಮಣೆ ಹೆಚ್ಚಾಗಿದೆ. ಹಠ ಹಿಡಿದು ಹೆಚ್ ಡಿ ಕುಮಾರಸ್ವಾಮಿ ಅವರನ್ನು ಸಿಎಂ ಕುರ್ಚಿಯಿಂದ ಇಳಿಸಿದರು. ಹಾಗೆಯೇ ಬಿ ಎಸ್ ಯಡಿಯೂರಪ್ಪ ಅವರು ಸ್ಥಾನ ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮಲು ಕಿಡಿಕಾರಿದರು.
ಸಿದ್ದರಾಮಯ್ಯಗೆ ಮತಿಭ್ರಮಣೆ, ಹಾಗಾಗಿ ಹೆಚ್‌ಡಿಕೆಯನ್ನ ಸಿಎಂ ಸ್ಥಾನದಿಂದ ಇಳಿಸಿದರು- ಶ್ರೀರಾಮುಲು - ಸಚಿವ ಸಂಪುಟ ವಿಸ್ತರಣೆ
ಪಕ್ಷದ ಏಳು ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಈಗಾಗಲೇ ಸಿಎಂ ಹೇಳಿದ್ದಾರೆ. ನಾಳೆ ಸಚಿವರ ಪಟ್ಟಿ ಬಿಡುಗಡೆಯಾಗಲಿದೆ. ಯಾರು ಸಚಿವರಾಗಬೇಕು ಎನ್ನುವುದು ಪಕ್ಷ ನಿರ್ಧರಿಸಲಿದೆ..
ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆಯುವುದು ಒಳ್ಳೆಯದು. ಮತ್ತೆ ಮುಖ್ಯಮಂತ್ರಿಯಾಗಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅದು ಆಗುವುದಿಲ್ಲ. ಸಚಿವ ಸಂಪುಟದ ಸ್ಥಾನ ಹಂಚಿಕೆ ಕುರಿತು ಪಕ್ಷ ಹಾಗೂ ವರಿಷ್ಠರು ತೀರ್ಮಾನಿಸುತ್ತಾರೆ. ಹಿರಿಯ ಶಾಸಕ ತಿಪ್ಪಾರೆಡ್ಡಿ ಅವರಿಗೆ ಮಂತ್ರಿಯಾಗುವ ಅಪೇಕ್ಷೆ ಇದೆ. ಪಕ್ಷ ಒಮ್ಮೆ ಅವಕಾಶ ಕೊಟ್ಟೇ ಕೊಡುತ್ತದೆ ಎಂದು ಹೇಳಿದರು.
ಇದನ್ನೂ ಓದಿ...'ಇನ್ನೊಮ್ಮೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಬಂದರೆ ನಾಲಿಗೆ ಕಿತ್ತು ಹಾಕುತ್ತೇವೆ'