ಕರ್ನಾಟಕ

karnataka

ETV Bharat / state

ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ ಸಚಿವ ಶ್ರೀ ರಾಮುಲು! - ಶ್ರೀರಾಮುಲು ಚಿತ್ರದುರ್ಗ ಭೇಟಿ ಲೇಟೆಸ್ಟ್​​ ಸುದ್ದಿ

ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಆಸ್ಪತ್ರೆಯ ವಿವಿಧ ವಾರ್ಡ್​​ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

minister  sriramulu hospital vasthvya in chitradurga
ಜಿಲ್ಲಾಸ್ಪತ್ರೆಯಲ್ಲಿ ಶ್ರೀ ರಾಮುಲು ವಾಸ್ತವ್ಯ

By

Published : Jan 24, 2020, 2:50 AM IST

ಚಿತ್ರದುರ್ಗ: ಇಲ್ಲಿನ ಜಿಲ್ಲಾಸ್ಪತ್ರೆಗೆ ವಾಸ್ತವ್ಯ ಹೂಡಲು ಆಗಮಿಸಿದ್ದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಮೊದಲಿಗೆ ಆಸ್ಪತ್ರೆಯ ವಿವಿಧ ವಾರ್ಡ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಶೀಲನೆ‌ ನಡೆಸಿದ ಆರೋಗ್ಯ ಸಚಿವ ಶ್ರೀ ರಾಮುಲು ರೋಗಿಗಳಿಂದ ಮಾಹಿತಿ ಕಲೆ ಹಾಕಿ ಬಳಿಕ ವಿಶ್ರಾಂತಿಗೆ ತೆರಳಿದರು. ಜಿಲ್ಲಾಸ್ಪತ್ರೆಯಲ್ಲೇ ಸಚಿವರಿಗಾಗಿ ವ್ಯವಸ್ಥೆ ಮಾಡಿದ್ದ ವಿಐಪಿ ವಾರ್ಡ್​​ನ ಕೊಠಡಿಯಲ್ಲಿ ರಾಮುಲು ನಿದ್ರೆಗೆ ಜಾರಿದರು. ಇನ್ನೂ ಮಧ್ಯರಾತ್ರಿ ಜಿಲ್ಲಾಸ್ಪತ್ರೆಗೆ ತಡವಾಗಿ ಭೇಟಿ ನೀಡಿದ ಆರೋಗ್ಯ ಸಚಿವರನ್ನು ಗುತ್ತಿಗೆ ಆಧಾರಿತ ನೌಕರರು ಭೇಟಿ ಮಾಡಿ ತಮ್ಮ ನೋವನ್ನು ಹೇಳಿಕೊಂಡರು.

ಉದ್ಯೋಗ ಭದ್ರತೆ ನೀಡುವಂತೆ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದ ಗುತ್ತಿಗೆ ಆಧಾರಿತ ನೌಕರರು ತಮ್ಮನ್ನು ಕೆಲಸದಿಂದ ಬಿಡುಗಡೆಗೊಳಿಸುವ ನಿರ್ಧಾರ ಕೈಬಿಡುವಂತೆ ಸಚಿವರಲ್ಲಿ ಮನವಿ ಮಾಡಿಕೊಂಡರು.

For All Latest Updates

TAGGED:

ABOUT THE AUTHOR

...view details