ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಪಾದಯಾತ್ರೆಯಲ್ಲಿ ಗುಂಪುಗಾರಿಕೆ ಹೆಚ್ಚಾಗಿದೆ: ಸಚಿವ ಶ್ರೀರಾಮುಲು

ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಲು ಒತ್ತಾಯಿಸಿ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ. ಕಾಂಗ್ರೆಸ್ ನಾಯಕರ ಪಾದಯಾತ್ರೆಯಲ್ಲಿ ಈಗಾಗಲೇ ಗುಂಪುಗಾರಿಕೆ ಹೆಚ್ಚಾಗಿದೆ. ಮುಂದಿನ ಚುನಾವಣೆಯಲ್ಲಿ ಯಾರು ಕ್ಯಾಪ್ಟನ್ ಆಗಬೇಕೆಂದು ಪೈಪೋಟಿಗೆ ಬಿದ್ದು ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಗೊತ್ತಿಲ್ಲ ಕಾಂಗ್ರೆಸ್ ಗೆಲ್ಲುವುದಿಲ್ಲ, ಕ್ಯಾಪ್ಟನ್ ಆಗುವುದಿಲ್ಲ ಎಂದು ಸಚಿವ ಶ್ರೀ ರಾಮುಲು ಹೇಳಿದ್ದಾರೆ.

minister-shriramulu-said-groupism-is-involved-in-the-congress-mekedatu-hiking
ಸಚಿವ ಶ್ರೀರಾಮುಲು

By

Published : Mar 2, 2022, 10:21 AM IST

Updated : Mar 2, 2022, 10:46 AM IST

ಚಿತ್ರದುರ್ಗ :ಕಾಂಗ್ರೆಸ್ ನಾಯಕರ ಪಾದಯಾತ್ರೆಯಲ್ಲಿ ಈಗಾಗಲೇ ಗುಂಪುಗಾರಿಕೆ ಹೆಚ್ಚಾಗಿದೆ. ಮುಂದಿನ ಎಲೆಕ್ಷನ್ ನಲ್ಲಿ ಗೆದ್ದರೆ ಯಾರು ಕ್ಯಾಪ್ಟನ್ ಆಗಬೇಕು ಎಂದು ಯೋಚನೆ ಮಾಡುತ್ತಿದ್ದಾರೆ. ಅದರೆ ಅವರಿಗೆ ತಿಳಿದಿಲ್ಲ , ಕಾಂಗ್ರೆಸ್ ನಾಯಕರು ಗೆಲ್ಲೋದು ಇಲ್ಲ, ಕ್ಯಾಪ್ಟನ್ ಆಗೋದು ಇಲ್ಲ ಎಂದು ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಚರ್ಚೆ ಮಾಡಲು ಕೈ ನಾಯಕರು ಅವಕಾಶ ನೀಡಲಿಲ್ಲ. ಇಷ್ಟು ವರ್ಷಗಳ ಕಾಲ ಅಧಿಕಾರದಲ್ಲಿದ್ದ ವೇಳೆ ಅವರು ಏನು ಮಾಡಿದರು. ಆಗ ಯಾಕೆ ಪಾದಯಾತ್ರೆ ಮಾಡಲಿಲ್ಲ. ಈ ಯೋಚನೆ ಅವರಲ್ಲಿ ಬಂದಿರಲಿಲ್ಲ. ಈಗ ಯಾಕೆ ಪಾದಯಾತ್ರೆ ಮಾಡುವ ಸ್ಥಿತಿ ಬಂದಿದೆ ಎಂದು ಯೋಚನೆ ಮಾಡಬೇಕು ಎಂದರು.

ಚಿತ್ರದುರ್ಗದಲ್ಲಿ ಸಚಿವ ಶ್ರೀರಾಮುಲು ಮಾತನಾಡಿದರು

ಮೊದಲನೇ ಪಾದಯಾತ್ರೆಯಲ್ಲಿ ವಿಫಲರಾಗಿದ್ದೀರಿ, ಇದೀಗ ಎರಡನೇ ಪಾದಯಾತ್ರೆ ಹೊರಟಿದ್ದೀರಿ. ಈಗ ನಾನು ಮುಂದೆ, ನೀನು ಮುಂದೆ ಎಂದು ಪೈಪೋಟಿ ಮಾಡಿಕೊಂಡು ಹೊರಟಿದ್ದೀರಿ. ಯಾವುದೇ ಪರಿಸ್ಥಿತಿಯಲ್ಲಿ ಜನ BJP ಯನ್ನೇ ಅಧಿಕಾರಕ್ಕೆ ತರುವ ಕೆಲಸ ಮಾಡುತ್ತಾರೆ. ಕಳೆದ ಬಾರಿ 104 ಸ್ಥಾನ ನೀಡಿದ್ದರು, ಈ ಬಾರಿ ಸ್ಪಷ್ಟ ಬಹುಮತ ಬರುತ್ತದೆ. ಮುಂಬರುವ ದಿನಗಳಲ್ಲಿ BJP ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಶ್ರೀರಾಮುಲು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು ಉಕ್ರೇನ್ ನಲ್ಲಿ ಸಿಲುಕಿದ ವಿದ್ಯಾರ್ಥಿಗಳ ಕರೆತರಲು ಮುಖ್ಯಮತ್ರಿಗಳು ಕೇಂದ್ರದ ನಾಯಕರ ಜೊತೆಯಲ್ಲಿ ಸಂಪರ್ಕದಲ್ಲಿದ್ದಾರೆ. ನಾನು ಕೂಡಾ ಈ ಭಾಗದ ವಿದ್ಯಾರ್ಥಿಗಳನ್ನು ವಾಪಸ್ ಕರೆತರಲು ಪ್ರಯತ್ನಿಸುತ್ತಿದ್ದೇನೆ. ಪೋಷಕರಲ್ಲಿ ಮಕ್ಕಳ ಕುರಿತು ಆತಂಕವಿದೆ, ಆತಂಕ ಪಡಬೇಡಿ. 2-3 ವಿಮಾನಗಳು ಬಂದಿದ್ದು, ಎಲ್ಲರನ್ನೂ ಶೀಘ್ರದಲ್ಲೇ ಕರೆತರುವ ಪ್ರಯತ್ನ ನಡೆಯುತ್ತದೆ ಎಂದು ಹೇಳಿದ್ದಾರೆ.

ಓದಿ :ಉಕ್ರೇನ್ ಮೇಲಿನ ದಾಳಿಗೆ ರಷ್ಯಾ ಬೆಲೆ ತೆರುವಂತೆ ಮಾಡ್ತೇವಿ: ಜೋ ಬೈಡನ್ ಪ್ರತಿಜ್ಞೆ

Last Updated : Mar 2, 2022, 10:46 AM IST

ABOUT THE AUTHOR

...view details