ಚಿತ್ರದುರ್ಗ: ಜಿಲ್ಲಾ ನೆರೆ ಪ್ರದೇಶಗಳಿಗೆ ಪ್ರವಾಸ ಕೈಗೊಂಡಿರುವ ಸಚಿವ ಶ್ರೀರಾಮುಲು ರಾಮಗಿರಿಯ ಸುಡುಗಾಡು ಸಿದ್ದರ ಸಮಸ್ಯೆ ಆಲಿಸದೇ ತೆರಳಿದ್ದಾರೆ.
ಸುಡುಗಾಡು ಸಿದ್ದರ ಕಾಲೋನಿಗೆ ಭೇಟಿ ಕೊಡದೆ ತೆರಳಿದ ಸಚಿವ ಶ್ರೀರಾಮುಲು - ಜಿಲ್ಲಾ ನೆರೆ ಪ್ರದೇಶಗಳಿಗೆ ಪ್ರವಾಸ
ಜಿಲ್ಲಾ ನೆರೆ ಪ್ರದೇಶಗಳಿಗೆ ಪ್ರವಾಸ ಕೈಗೊಂಡಿರುವ ಸಚಿವ ಶ್ರೀರಾಮುಲು ರಾಮಗಿರಿಯ ಸುಡುಗಾಡು ಸಿದ್ದರ ಸಮಸ್ಯೆ ಆಲಿಸದೇ ತೆರಳಿದ್ದಾರೆ.

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಅವರು ನೆರೆ ಹಾವಳಿ ಪ್ರದೇಶಗಳಿಗೆ ಭೇಟಿ ನೀಡಿದರಾದರೂ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ರಾಮಗಿರಿಯಲ್ಲಿ ಮಳೆಯಿಂದಾಗಿ ಸಂಪೂರ್ಣ ಜಲಾವೃತವಾಗಿರುವ ಸುಡುಗಾಡು ಸಿದ್ದರ ಕಾಲೋನಿಗೆ ಭೇಟಿ ನೀಡದೇ ಇರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಸುಡುಗಾಡು ಸಿದ್ದರ ಕಾಲೋನಿಗೆ ಭೇಟಿ ನೀಡದೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಲೋಕದೊಳಲು ರಂಗನಾಥ ಸ್ವಾಮಿ ಬೆಟ್ಟ, ಹೊಸದುರ್ಗ ತಾಲೂಕಿನ ನೀಲಗುಂದ ಕೆರೆ ವೀಕ್ಷಣೆ ಮಾಡಿ ತೆರಳಿದ್ದಾರೆ. ಇತ್ತ ಸಚಿವರು ಆಗಮಿಸುತ್ತಾರೆ ಎಂದು ಕಾದು ಕೂತಿದ್ದ ಸುಡುಗಾಡು ಸಿದ್ದರು ಸಚಿವರು ಸಮಸ್ಯೆ ಆಲಿಸದೇ ತೆರಳಿದ್ದಕ್ಕೆ ಬೇಸರಗೊಂಡಿದ್ದಾರೆ.