ಚಿತ್ರದುರ್ಗ:ಕೊರೊನಾ ವೈಸರ್‌ಗೆ ಜ. 16ರಿಂದ ಲಸಿಕೆ ನೀಡಲಾಗುತ್ತಿದ್ದು, ಲಸಿಕೆ ನೀಡಲು ಕೊರೊನಾ ವಾರಿಯರ್ಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಜನವರಿ 16ರ ಬಳಿಕ ಕೋವಿಡ್ ಲಸಿಕೆ: ಸಚಿವ ಶ್ರೀರಾಮುಲು - ಕೊರೊನಾ ವಾರಿಯರ್ಸ್ಗೆ ಲಸಿಕೆ ವಿತರಣೆ
ಬಿಜೆಪಿ ಸರ್ಕಾರ ರೈತರಿಗಾಗಿ ಜಾರಿಗೊಳಿಸಿದ ಮೂರು ಕಾಯ್ದೆಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಅದಕ್ಕೆ ಸಂಬಂಧಿಸಿದಂತೆ ನಮ್ಮ ವಕೀಲರು ಸಂಪೂರ್ಣ ಮಾಹಿತಿ ಒದಗಿಸಲಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮಲು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮಲು
ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾದ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಸಿಗಲಿದೆ. ದೇಶದ ಪ್ರಧಾನಿ, ವಿಜ್ಞಾನಿಗಳು ಹಾಗೂ ವೈದ್ಯರ ಪ್ರರಿಶ್ರಮದಿಂದ ಲಸಿಕೆ ನಮಗೆ ಲಭ್ಯವಾಗಿದೆ. ಹಂತ ಹಂತವಾಗಿ ಎಲ್ಲರಿಗೂ ನೀಡಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ...ರಾಜಧಾನಿ ತಲುಪಿದ ಕೊವಿಶೀಲ್ಡ್ ಲಸಿಕೆಯ ಬಾಕ್ಸ್ ಗಳು.. ದಾಸ್ತಾನು ಕೇಂದ್ರದಲ್ಲಿ ಭದ್ರ..