ಕರ್ನಾಟಕ

karnataka

ETV Bharat / state

ಕೆಡಿಪಿ ಸಭೆಯಲ್ಲಿ ಅಧಿಕಾರಿಯನ್ನು ಅಮಾನತು ಮಾಡಿದ ಸಚಿವ ರಾಮುಲು - the officer suspended during the KDP meeting

ಇಲಾಖೆ ಬಗ್ಗೆ ಮಾಹಿತಿ ಕೇಳಿದ‌ ಸಚಿವರು ಹಾಗು ಶಾಸಕರು, ಯಾವುದೇ ಮಾಹಿತಿ ನೀಡದ ಹಿರಿಯ ಅಭಿಯಂತರ ಸುಭಾನ್ ಸಾಬ್ ಅನ್ನು ಅಮಾನತು ಮಾಡಿ, ಸಭೆಯಲ್ಲೇ ಘೋಷಣೆ ಮಾಡಿದರು.

ಕೆಡಿಪಿ ಸಭೆ
ಕೆಡಿಪಿ ಸಭೆ

By

Published : Jul 15, 2020, 9:23 PM IST

ಚಿತ್ರದುರ್ಗ: ಜಿಲ್ಲಾ ಪಂಚಾಯಿತಿಯಲ್ಲಿ ಇಂದು ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಓರ್ವ ಅಧಿಕಾರಿಯನ್ನು ಸಸ್ಪೆಂಡ್ ಮಾಡಿದರು.

ಸಚಿವ ಶ್ರೀರಾಮುಲು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು. ಎಲ್ಲಾ ಇಲಾಖೆಗಳ ಬಗ್ಗೆ ಮಾಹಿತಿ ಪಡೆದ ರಾಮುಲು, ಕೆಲಸ ಮಾಡದೆ ಮೈಗಳ್ಳತನ‌ ಮಾಡುವವರಿಗೆ ಸರಿಯಾಗಿ ಕಾರ್ಯನಿರ್ವಹಿಸುವಂತೆ ಆದೇಶಿಸಿದರು.

ಕೆಡಿಪಿ ಸಭೆ

ಕರ್ತವ್ಯ ಲೋಪ ಹಾಗೂ ಸರ್ಕಾರದ ಅನುದಾನ ಬಳಕೆ ಮಾಡಲು ವಿಳಂಬ ನೀತಿ ತೋರಿದ್ದ ಬೆನ್ನಲ್ಲೆ ಪಂಚಾಯತ್ ರಾಜ್ ಕಾರ್ಯಪಾಲಕ ಎಂಜಿನಿಯರ್ ಅಮಾನತುಗೊಳಿಸಿದರು. ಇಲಾಖೆ ಬಗ್ಗೆ ಮಾಹಿತಿ ಕೇಳಿದ‌ ಸಚಿವರು ಹಾಗು ಶಾಸಕರು, ಯಾವುದೇ ಮಾಹಿತಿ ನೀಡದ ಹಿರಿಯ ಅಭಿಯಂತರ ಸುಭಾನ್ ಸಾಬ್ ಅನ್ನು ಅಮಾನತು ಮಾಡಿ, ಸಭೆಯಲ್ಲೇ ಘೋಷಣೆ ಮಾಡಿದರು.

ABOUT THE AUTHOR

...view details