ಚಿತ್ರದುರ್ಗ:ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಚಿವ ಶ್ರೀರಾಮುಲು ಆಪ್ತ (ಪಿಎ) ಪಾಲಯ್ಯ ಎಂಬುವರು 182 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಚಿತ್ರದುರ್ಗ: ಗ್ರಾಪಂ ಚುನಾವಣೆಯಲ್ಲಿ ಸಚಿವ ರಾಮುಲು ಆಪ್ತನ ಗೆಲವು - ಶ್ರೀರಾಮುಲು ಆಪ್ತ ಎಂದು ಗುರುತಿಸಿಕೊಂಡಿರುವ ಪಾಲಯ್ಯ
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಚಿವ ಶ್ರೀರಾಮುಲು ಆಪ್ತ ಎಂದು ಗುರುತಿಸಿಕೊಂಡಿರುವ ಪಾಲಯ್ಯ ಎಂಬುವರು 182 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ರಾಮುಲು ಆಪ್ತ
ಹಾಲಿ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಹಾಗೂ ಪಿಎ ಎಂದು ಗುರುತಿಸಿಕೊಂಡಿರುವ ಪಾಲಯ್ಯ, ಇಲ್ಲಿನ ಕಾಲುವೇಹಳ್ಳಿಯ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ 643 ಮತಗಳನ್ನು ಪಡೆದರು. ಇನ್ನು ಎದುರಾಳಿ ತಿಮ್ಮಣ್ಣ 461 ಮತಗಳನ್ನು ಪಡೆದರು. ಈ ಮೂಲಕ ಪಾಲಯ್ಯ 182 ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿದ್ದಾರೆ.