ಚಿತ್ರದುರ್ಗ: ಇನ್ನೂ ಎರಡು ವರ್ಷ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಇನ್ನೂ ಹೇಳಬೇಕು ಅಂದರೆ, ಮುಂದಿನ ಚುನಾವಣೆಯೂ ಸಹ ಯಡಿಯೂರಪ್ಪ ನೇತೃತ್ವದಲ್ಲಿಯೇ ಮಾಡುತ್ತೇವೆ ಎಂದು ಸಚಿವ ನಾರಾಯಣ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಮೈಸೂರು ಭಾಗದಲ್ಲಿ ಮೂರು ಪಕ್ಷಗಳ ಸರ್ಕಾರ ಎಂಬ ಸಿಪಿವೈ ಹೇಳಿಕೆಗೆ ಪ್ರತಿಕ್ರಿಯಿಸಿ, ಅದು ಅವರ ಸ್ವಂತ ಅಭಿಪ್ರಾಯ. ಆ ಬಗ್ಗೆ ನಾನೇನು ಟಿಪ್ಪಣಿ ಮಾಡುವುದಿಲ್ಲ. ಮೈಸೂರು ಭಾಗದಲ್ಲಿ ಈ ವಾತಾವರಣ ನನ್ನ ಗಮನಕ್ಕೆ ಬಂದಿಲ್ಲ ಎಂದರು. ನಿರಾಣಿ ಹೈಕಮಾಂಡ್ ಬುಲಾವ್ ವಿಚಾರವಾಗಿ ಮಾತನಾಡುತ್ತಾ, ಅವರಿಗೆ ಬೇರೆ ಬೇರೆ ಕೆಲಸಗಳು ಇರುತ್ತವೆ. ನಿರಾಣಿ ಒಬ್ಬ ಉದ್ಯಮಿ. ಬೇರೆ ಕೆಲಸಗಳಿರುವುದಿಂದ ಕರೆಸಿಕೊಂಡಿರುತ್ತಾರೆ, ಅದರಲ್ಲಿ ತಪ್ಪೇನಿದೆ? ಎಂದರು.