ಕರ್ನಾಟಕ

karnataka

ETV Bharat / state

ಈಶ್ವಾರನಂದ ಪುರಿ ಶ್ರೀಯವರಿಗೆ ಏಕವಚನದಲ್ಲಿ ನಿಂದನೆ: ಸಚಿವ ಮಾಧುಸ್ವಾಮಿ ವಿರುದ್ಧ ಆಕ್ರೋಶ - ಕನಕ ಗುರುಪೀಠದ ಹೊಸದುರ್ಗ ಶಾಖಾ ಮಠದ ಈಶ್ವಾರನಂದ ಪುರಿ ಶ್ರೀ ನಿಂದನೆ

ಕನಕ ಗುರುಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದ ಪುರಿ ಶ್ರೀಯವರಿಗೆ ಸಚಿವ ಮಾಧುಸ್ವಾಮಿ ಏಕವಚನದಲ್ಲಿ ನಿಂದನೆ ಮಾಡಿದ್ದಾರೆಂದು ಆರೋಪಿಸಿ ಹಾಲುಮತ ಸಮುದಾಯದವರು ಬೀದಿಗಿಳಿದು ಪ್ರತಿಭಟಿಸಿದ್ದಾರೆ.

ಹಾಲುಮತ ಸಮುದಾಯದವರಿಂದ ಪ್ರತಿಭಟನೆ

By

Published : Nov 20, 2019, 3:26 PM IST

ಚಿತ್ರದುರ್ಗ:ಕನಕ ಗುರುಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದ ಪುರಿ ಶ್ರೀಯವರಿಗೆ ಸಚಿವ ಮಾಧುಸ್ವಾಮಿ ಏಕವಚನದಲ್ಲಿ ನಿಂದನೆ ಮಾಡಿದ್ದಾರೆಂದು ಆರೋಪಿಸಿ ಹಾಲುಮತ ಸಮುದಾಯದವರು ಬೀದಿಗಿಳಿದು ಪ್ರತಿಭಟಿಸಿದ್ದಾರೆ.

ಹಾಲುಮತ ಸಮುದಾಯದವರಿಂದ ಪ್ರತಿಭಟನೆ

ನಗರದ ಒನಕೆ ಓಬವ್ವ ವೃತ್ತದಲ್ಲಿ ಹಾಲುಮತ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಜಮಾಯಿಸಿದ ಜನರು, ಸಚಿವ ಮಾಧುಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾಧುಸ್ವಾಮಿಯವರು ತಕ್ಷಣ ಕ್ಷಮೆಯಾಚಿಸಬೇಕು, ರಾಜ್ಯಪಾಲರು ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು.

ನಗರದ ಡಿಸಿ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಛೇರಿ ತಲುಪಿ ಅಪರ ಜಿಲ್ಲಾಧಿಕಾರಿ ಸಂಗಪ್ಪನವರಿಗೆ ಮನವಿ ಸಲ್ಲಿಸಲಾಯಿತು. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರ್‌ನಲ್ಲಿರುವ ವೃತ್ತಕ್ಕೆ ಕನಕದಾಸರ ಹೆಸರನ್ನಿಡುವ ವಿಚಾರಕ್ಕೆ ಸಚಿವ ಸಚಿವರು ಹಾಗೂ ಈಶ್ವಾರನಂದ ಶ್ರೀ ಮಧ್ಯೆ ನಡೆದ ಶಾಂತಿ ಸಭೆಯಲ್ಲಿ ವಾಗ್ವಾದ ಉಂಟಾಗಿತ್ತು.

ABOUT THE AUTHOR

...view details