ಚಿತ್ರದುರ್ಗ:ಸಾಮಾಜಿಕ ಅಂತರ ಹಾಗೂ ಮಾಸ್ಕ್ ಹಾಕುವಂತೆ ಜನಸಾಮಾನ್ಯರಿಗೆ ಪಾಠ ಮಾಡುವ ಜನಪ್ರತಿನಿಧಿಗಳು ಕೊರೊನಾ ನಿಯಮಾವಳಿಗಳನ್ನು ಪಾಲಿಸುವುದು ವಿರಳವಾಗುತ್ತಿದೆ.
ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಾಮಾಜಿಕ ಅಂತರ ಮರೆತ ಸಚಿವ ಈಶ್ವರಪ್ಪ - ಕೆ.ಎಸ್.ಈಶ್ವರಪ್ಪ
ಚಿತ್ರದುರ್ಗ ನಗರದಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಅಂತರ್ಜಲ ಚೇತನ ಕಾರ್ಯಕ್ರಮಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಈಶ್ವರಪ್ಪ ಸಾಮಾಜಿಕ ಅಂತರ ಕಾಪಾಡದೆ ಕಾರ್ಯಕರ್ತರೊಂದಿಗೆ ಆಗಮಿಸಿದರು.
ಚಿತ್ರದುರ್ಗ ನಗರದಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಅಂತರ್ಜಲ ಚೇತನ ಕಾರ್ಯಕ್ರಮಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಈಶ್ವರಪ್ಪ ಸಾಮಾಜಿಕ ಅಂತರ ಕಾಪಾಡದೆ ಕಾರ್ಯಕರ್ತರೊಂದಿಗೆ ಆಗಮಿಸಿದರು. ಕಾರ್ಯಕ್ರಮ ಮುಗಿಯುವ ತನಕ ಅಂತರ ಕಾಪಾಡಿಕೊಂಡಿದ್ದ ಅವರು, ಕಾರ್ಯಕ್ರಮ ಮುಗಿದ ಬಳಿಕ ಅದೇ ಸಾಮಾಜಿಕ ಅಂತರ ಮರೆತು ಜನಸಾಮಾನ್ಯರೊಂದಿಗೆ ಹಾಗೂ ಬಿಜೆಪಿ ಕಾರ್ಯಕರ್ತರೊಂದಿಗೆ ಗುಂಪು ಗುಂಪಾಗಿ ಸನ್ಮಾನ ಮಾಡಿಸಿಕೊಂಡರು.
ಬಳಿಕ ತಮ್ಮ ಕಾರಿನತ್ತ ತೆರಳುತ್ತಿದ್ದ ಸಚಿವರಿಗೆ ಜನರು ಗುಂಪು ಕಟ್ಟಿಕೊಳ್ಳುವ ಮೂಲಕ ಸಾಮಾಜಿಕ ಅಂತರದ ನಿಯಮವನ್ನು ಗಾಳಿಗೆ ತೂರಿದ್ದು, ಸಂಸದ ಎ. ನಾರಾಯಣ ಸ್ವಾಮಿ ಕೂಡ ಅದೇ ಮಾರ್ಗವನ್ನು ಅನುಸರಿಸಿದರು.