ಕರ್ನಾಟಕ

karnataka

ETV Bharat / state

ಗಾಂಧೀಜಿಯವರೇ ಆರ್‌ಎಸ್‌ಎಸ್‌ ಕ್ಯಾಂಪ್‌ಗೆ ಬಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.. ಸಚಿವ ಕೆ ಎಸ್‌ ಈಶ್ವರಪ್ಪ

ಸಿದ್ದರಾಮಯ್ಯ, ಡಿಕೆಶಿವಕುಮಾರ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಯಯವರೇ ರಾಷ್ಟ್ರೀಯ ವಿಚಾರಗಳ ಜೊತೆಗೆ ರಾಜಕಾರಣ ಮಾಡಬೇಡಿ. ರಾಜಕಾರಣ ಮಾಡಲು ಸಾಕಷ್ಟು ಜಾಗಗಳಿವೆ. ದೇಶದ ಪ್ರತಿಯೊಂದು ಕ್ಷೇತ್ರಗಳಲ್ಲಿ ಯುವಕರಿಗೆ ರಾಷ್ಟ್ರೀಯ ವಿಚಾರಗಳು ಹಾಗೂ ಸಿದ್ಧಾಂತಗಳನ್ನು ಆರ್​ಎಸ್​ಎಸ್​ ತಿಳಿಸುವ ಕೆಲಸ ಮಾಡುತ್ತಿದೆ..

Minister Eshwarappa
ಸಚಿವ ಈಶ್ವರಪ್ಪ

By

Published : Oct 11, 2021, 5:11 PM IST

ಚಿತ್ರದುರ್ಗ :ರಾಮನ ಬಗ್ಗೆ ರಾವಣನಿಗೆ ಎಲ್ಲಾ ಗೊತ್ತಿತ್ತು. ಶಿವಾಜಿ ಬಗ್ಗೆ ಔರಂಗಜೇಬ್​ಗೆ ಏನೂ ಗೊತ್ತಿರಲಿಲ್ಲ. ಶಿವಾಜಿ ಮಹಾರಾಜರು ಹುಟ್ಟಿರಲಿಲ್ಲ ಅಂದಿದ್ರೆ ಇವತ್ತು ದೇಶದಲ್ಲಿ ಯಾವ ಹಿಂದೂಗಳು ಉಳಿಯುತ್ತಿರಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.

ಮತಾಂತರ ಕುರಿತಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿರುವುದು..

ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತಾನಾಡಿದ ಅವರು, ಇವತ್ತು ದೇಶದಲ್ಲಿ ಆರ್​​​ಎಸ್ಎಸ್ ಇರಲಿಲ್ಲ ಅಂದಿದ್ರೆ ಪ್ರತಿಯೊಬ್ಬರೂ ಯೋಚನೆ ಮಾಡಬೇಕಿತ್ತು. ಈ ದೇಶ ಪಾಕಿಸ್ತಾನನೋ ಅಥವಾ ಇನ್ನೊಂದೋ ಆಗೋಗುತ್ತಿತ್ತು. ಪಾಪ ಸಿದ್ದರಾಮಯ್ಯನವರು ಯಾವುದೇ ಕಲ್ಪನೆ ಇಲ್ಲದೆ ಮುಸ್ಲಿಂ ಮತಗಳನ್ನು ಇಟ್ಟುಕೊಂಡು ಒಂದೇ ಲೆಕ್ಕದಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಈಶ್ವರಪ್ಪ ಅವರು ವಿಪಕ್ಷ ನಾಯಕನ ವಿರುದ್ಧ ಕಿಡಿಕಾರಿದರು.

ಸಿದ್ದರಾಮಯ್ಯ, ಡಿಕೆಶಿವಕುಮಾರ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಯಯವರೇ ರಾಷ್ಟ್ರೀಯ ವಿಚಾರಗಳ ಜೊತೆಗೆ ರಾಜಕಾರಣ ಮಾಡಬೇಡಿ. ರಾಜಕಾರಣ ಮಾಡಲು ಸಾಕಷ್ಟು ಜಾಗಗಳಿವೆ. ದೇಶದ ಪ್ರತಿಯೊಂದು ಕ್ಷೇತ್ರಗಳಲ್ಲಿ ಯುವಕರಿಗೆ ರಾಷ್ಟ್ರೀಯ ವಿಚಾರಗಳು ಹಾಗೂ ಸಿದ್ಧಾಂತಗಳನ್ನು ಆರ್​ಎಸ್​ಎಸ್​ ತಿಳಿಸುವ ಕೆಲಸ ಮಾಡುತ್ತಿದೆ. ಗಾಂಧೀಜಿಯವರೇ ಆರ್​​ಎಸ್ಎಸ್ ಕ್ಯಾಂಪಿಗೆ ಬಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದರು.

ಗೋ ಹತ್ಯೆ ನಿಷೇಧ ಮಾಡುವ ಸಂದರ್ಭದಲ್ಲಿ ಗೋವುಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾಗ ತಡೆಯಲು ಹೋದ ಹಿಂದೂ ಯುವಕರನ್ನು ಕಗ್ಗೊಲೆ ಮಾಡಿದ್ದರು. ಇದರಿಂದ ಸಿದ್ದರಾಮಯ್ಯ ಅವರು ಅಧಿಕಾರವನ್ನು ಕಳೆದುಕೊಂಡರು. ಕಾಂಗ್ರೆಸ್​​ನವರು ಕೊಲೆಗಡುಕರು, ಬಿಜೆಪಿಯವರಲ್ಲ ಎಂದರು.

ಇದನ್ನೂ ಓದಿ: ಕರ್ನಾಟಕ ಸೇರಿ 17 ರಾಜ್ಯಗಳಿಗೆ 9,871 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ ಕೇಂದ್ರ

ABOUT THE AUTHOR

...view details