ಚಿತ್ರದುರ್ಗ: ಅಪರಿಚಿತ ವಾಹನ ಹಾಗೂ ಮಿನಿ ಗೂಡ್ಸ್ ವಾಹನ ನಡುವೆ ನಡೆದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ದುರಂತ ಅಂತ್ಯ ಕಂಡ ಘಟನೆ ತಡರಾತ್ರಿ ಜರುಗಿದೆ.
ಅಪರಿಚಿತ ವಾಹನಕ್ಕೆ ಮಿನಿ ಗೂಡ್ಸ್ ವಾಹನ ಡಿಕ್ಕಿ, ಓರ್ವ ಸಾವು - ವ್ಯಕ್ತಿ ಸಾವು
ಅಪರಿಚಿತ ವಾಹನ ಹಾಗೂ ಮಿನಿ ಗೂಡ್ಸ್ ವಾಹನ ನಡುವೆ ನಡೆದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಿರಿಯೂರು ತಾಲೂಕಿನ ಗೊರಲಡಕು ಗೇಟ್ನ ಕೂಗಳತೆ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ-04ರಲ್ಲಿ ಘಟನೆ ನಡೆದಿದೆ.
![ಅಪರಿಚಿತ ವಾಹನಕ್ಕೆ ಮಿನಿ ಗೂಡ್ಸ್ ವಾಹನ ಡಿಕ್ಕಿ, ಓರ್ವ ಸಾವು chitradurga](https://etvbharatimages.akamaized.net/etvbharat/prod-images/768-512-9324922-1100-9324922-1603778105915.jpg)
ಅಪರಿಚಿತ ವಾಹನಕ್ಕೆ ಮಿನಿ ಗೂಡ್ಸ್ ವಾಹನ ಡಿಕ್ಕಿ: ಓರ್ವ ಸಾವು
ಅಜ್ಜಂಪುರ ಗ್ರಾಮದ ಜಗದೀಶ್ (42) ಮೃತ ವ್ಯಕ್ತಿ. ಹಿರಿಯೂರು ತಾಲೂಕಿನ ಗೊರಲಡಕು ಗೇಟ್ನ ಕೂಗಳತೆ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ-04ರಲ್ಲಿ ಘಟನೆ ನಡೆದಿದೆ. ಮಿನಿ ಗೂಡ್ಸ್ ವಾಹನ ಚಾಲಕ ಓಂಕಾರ್ (26) ಗಂಭೀರವಾಗಿ ಗಾಯಗೊಂಡಿದ್ದಾನೆ. ಮೃತ ಜಗದೀಶ್ ಕಳೆದ ದಿನ ತಡರಾತ್ರಿ ಮಿನಿ ಗೂಡ್ಸ್ ವಾಹನದಲ್ಲಿ ಈರುಳ್ಳಿ ತುಂಬಿಕೊಂಡು ಬೆಂಗಳೂರಿಗೆ ತೆರಳುತ್ತಿದ್ದ ಎನ್ನಲಾಗಿದೆ.
ಗಾಯಾಳುವನ್ನು ಹಿರಿಯೂರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ತಿಳಿದ ಹಿರಿಯೂರು ಗ್ರಾಮಾಂತರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.