ಚಿತ್ರದುರ್ಗ: ಕೊರೊನಾ ಸೋಂಕು ತಡೆಗೆ ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ಸರ್ಕಾರದಿಂದ ಹಾಲು ವಿತರಣೆ ಮಾಡಲಾಗುತ್ತಿದೆ. ಚಿತ್ರದುರ್ಗ ನಗರದಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹಾಲು ಪಡೆಯಲು ಮುಗಿಬಿದ್ದ ದೃಶ್ಯ ಕಂಡುಬಂತು.
ಹಾಲು ವಿತರಣೆ ವೇಳೆ ಸಾಮಾಜಿಕ ಅಂತರ ಮರೆತ ಜನ
ಚಿತ್ರದುರ್ಗದ ಗಾಂಧಿನಗರ ಬಡಾವಣೆಯಲ್ಲಿ ತಾಲೂಕು ಆಡಳಿತದಿಂದ ಹಾಲು ವಿತರಣೆ ಮಾಡುವ ವೇಳೆ ಸಾರ್ವಜನಿಕರು ಸಾಮಾಜಿಕ ಅಂತರ ಮರೆತರು.
ಹಾಲಿಗಾಗಿ ಮುಗಿಬಿದ್ದ ಜನ
ಜನರು ಮುಗಿಬೀಳುತ್ತಿದ್ದಂತೆ ಹಾಲು ವಿತರಕರು ಕೆಲ ಕಾಲ ಹಾಲು ವಿತರಣೆ ಕಾರ್ಯ ಸ್ಥಗಿತಗೊಳಿಸಬೇಕಾಯ್ತು.