ಕರ್ನಾಟಕ

karnataka

ETV Bharat / state

ತುರ್ತು ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಲು ಸಿದ್ಧತೆ ಮಾಡಿಕೊಳ್ಳಿ.. ಬಿಡಿಎ ಆಯುಕ್ತ ಡಾ.ಪ್ರಕಾಶ್

ಹೊರ ರಾಜ್ಯ ಅಥವಾ ಹೊರ ಜಿಲ್ಲೆಗಳಿಂದ ಅನುಮತಿಯೊಂದಿಗೆ ಪ್ರವೇಶಿಸುವ ಜನರೊಂದಿಗೆ ಚೆಕ್‍ಪೊಸ್ಟ್​ನಲ್ಲಿರುವ ಸಿಬ್ಬಂದಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷತಾ ವಿಧಾನಗಳೊಂದಿಗೆ ವ್ಯವಹರಿಸಬೇಕು. ನಿರ್ಲಕ್ಷ್ಯದ ಕಾರಣದಿಂದಾಗಿ ಜಿಲ್ಲೆಯಲ್ಲಿ ಯಾವುದೇ ಅಧಿಕಾರಿಗಳು, ಸಿಬ್ಬಂದಿ,ವೈದ್ಯರು,ನರ್ಸ್‍ಗಳು, ಆಶಾ ಕಾರ್ಯಕರ್ತೆಯರು ಸೇರಿ ಯಾರಿಗೂ ಸೋಂಕು ಹರಡಬಾರದು.

Meeting on the status of Covid-19 infection in chitradurga
ತುರ್ತು ಪರಿಸ್ಥಿತಿಯನ್ನ ಸಮರ್ಥವಾಗಿ ನಿಭಾಯಿಸಲು ಸಕಲ ಸಿದ್ಧತೆ ಮಾಡಿಕೊಳ್ಳಿ: ಬಿಡಿಎ ಆಯುಕ್ತ ಡಾ.ಪ್ರಕಾಶ್

By

Published : May 10, 2020, 1:41 PM IST

ಚಿತ್ರದುರ್ಗ:ಜಿಲ್ಲೆಯಲ್ಲಿ 6 ಕೊವೀಡ್​-19 ಪಾಸಿಟಿವ್​ ಪ್ರಕರಣ ಪತ್ತೆಯಾಗಿವೆ. ತುರ್ತು ಪರಿಸ್ಥಿತಿಯನ್ನ ಸಮರ್ಥವಾಗಿ ನಿಭಾಯಿಸಲು ಸಕಲ ಸಿದ್ಧತೆ ಮಾಡಿಕೊಳ್ಳಿ ಎಂದು ಬಿಡಿಎ ಆಯುಕ್ತ ಡಾ.ಪ್ರಕಾಶ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನ ಸ್ಥಿತಿಗತಿ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹಸಿರು ವಲಯದಲ್ಲಿ ಗುರುತಿಸಿಕೊಂಡು, ದಿಢೀರನೆ ಕಿತ್ತಳೆ ವಲಯಕ್ಕೆ ಬದಲಾಗಿರುವ ಜಿಲ್ಲೆಗಳ ಬಗ್ಗೆ ಪ್ರಧಾನಮಂತ್ರಿ ಖುದ್ದಾಗಿ ಮಾಹಿತಿ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಗುಜರಾತ್‍ನ ಅಹಮದಾಬಾದ್‍ನಿಂದ ಜಿಲ್ಲೆಗೆ ಆಗಮಿಸಿದ 15 ತಬ್ಲಿಘಿಗಳ ಪೈಕಿ ಒಟ್ಟು 6 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಅವರಿಗೆ ಕೊರೊನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹೊರ ರಾಜ್ಯ ಅಥವಾ ಹೊರ ಜಿಲ್ಲೆಗಳಿಂದ ಅನುಮತಿಯೊಂದಿಗೆ ಪ್ರವೇಶಿಸುವ ಜನರೊಂದಿಗೆ ಚೆಕ್‍ಪೊಸ್ಟ್​ನಲ್ಲಿರುವ ಸಿಬ್ಬಂದಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷತಾ ವಿಧಾನಗಳೊಂದಿಗೆ ವ್ಯವಹರಿಸಬೇಕು. ನಿರ್ಲಕ್ಷ್ಯದ ಕಾರಣದಿಂದಾಗಿ ಜಿಲ್ಲೆಯಲ್ಲಿ ಯಾವುದೇ ಅಧಿಕಾರಿಗಳು, ಸಿಬ್ಬಂದಿ,ವೈದ್ಯರು,ನರ್ಸ್‍ಗಳು, ಆಶಾ ಕಾರ್ಯಕರ್ತೆಯರು ಸೇರಿ ಯಾರಿಗೂ ಸೋಂಕು ಹರಡಬಾರದು. ಹೀಗಾಗಿ ಎಲ್ಲರೂ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ABOUT THE AUTHOR

...view details