ಚಿತ್ರದುರ್ಗ: ಜಿಲ್ಲೆಯ ಕೆರೆ ತುಂಬಿಸುವ ಯೋಜನೆ ವಿಳಂಬ ಕುರಿತು ಲೋಕಸಭಾ ಸದಸ್ಯ ಎ ನಾರಾಯಣ ಸ್ವಾಮಿ ನೇತೃತ್ವದ ಸಭೆಯಲ್ಲಿ ಬಯಲಾಗಿದೆ.
ಕೋಟೆ ನಾಡಿನ ಕೆರೆ ತುಂಬಿಸುವ ಯೋಜನೆ ವಿಳಂಬದ ಅಸಲಿ ಸತ್ಯ ಬಯಲು! - ಭದ್ರ ಮೇಲ್ದಂಡೆ ಯೋಜನೆ ವಿಳಂಬ ಲೇಟೆಸ್ಟ್ ನ್ಯೂಸ್
ಚಿತ್ರದುರ್ಗದ ಭದ್ರಾ ಯೋಜನೆಗಾಗಿ ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ವಿಳಂಬ ಸಂಬಂಧ ಯೋಜನೆಯ ಅಧಿಕಾರಿಗಳ ವಿರುದ್ಧ ಆರೋಪ ಕೇಳಿ ಬಂದಿದೆ.
ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳ ಕಣ್ಣಾಮುಚ್ಚಾಲೆ ಆಟ ಬಹಿರಂಗವಾಗಿದ್ದು, ಭದ್ರಾ ಯೋಜನೆಗಾಗಿ ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ವಿಳಂಬಕ್ಕೆ ಅಧಿಕಾರಿಗಳ ಕಣ್ಣಾ ಮುಚ್ಚಾಲೆ ಆಟ ಕಾರಣ ಎಂದು ತಿಳಿದು ಬಂದಿದೆ. ಭೂಮಿ ನೀಡಿರುವ ರೈತರ ಅಗತ್ಯ ದಾಖಲೆಗಳನ್ನು ನೀಡದೇ ಪರಿಹಾರದ ಪಟ್ಟಿ ತಯಾರಿಸಿರುವ ಭದ್ರಾ ಯೋಜನೆಯ ಅಧಿಕಾರಿಗಳಿಗೆ ಸಂಸದ ಎ ನಾರಾಯಣ ಸ್ವಾಮಿ ಸಭೆಯಲ್ಲೇ ತರಾಟೆ ತೆಗೆದುಕೊಂಡರು. ಭೂಮಿ ಕಳೆದುಕೊಂಡ ರೈತರ ಬಗ್ಗೆ ಅಧಿಕಾರಿಗಳು ಮಾಹಿತಿ ಮುಚ್ಚಿಟ್ಟಿದ್ದು, ಜಿಲ್ಲಾಧಿಕಾರಿ ಲಕ್ಷ ಲಕ್ಷ ಪರಿಹಾರ ಯಾರಿಗೆ ಕೊಡಬೇಕು ಎಂದು ಸಭೆಯಲ್ಲಿ ಬಹಿರಂಗವಾಗಿ ಪ್ರಶ್ನಿಸಿದರು.
ಇನ್ನು ಭದ್ರಾ ಯೋಜನೆಯ ಅಧಿಕಾರಿಗಳು ದಾಖಲೆ ನೀಡದೇ ಸಹಿ ಮಾಡಲು ಕೇಳುತ್ತಾರೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಸಭೆಯಲ್ಲೆ ಅಸಹಾಯಕತೆ ತೋರಿದ್ದು, ಪರಿಹಾರ ತಡೆ ಹಿಡಿದಿರುವುದಕ್ಕೆ ಅಸಲಿ ಕಾರಣವನ್ನು ಸಂಸದರಿಗೆ ಸವಿಸ್ತಾರವಾಗಿ ತಿಳಿಸಿದರು. ಭದ್ರಾ ಮೇಲ್ದಂಡೆ ಯೋಜನೆ ಹಣ ಕಬಳಿಸಲು ಅಧಿಕಾರಿಗಳು ಮುಂದಾಗಿದ್ದಾರಾ ಎಂಬ ಶಂಕೆ ವ್ಯಕ್ತವಾಗ್ತಿದ್ದಂತೆ ಸಂಸದ ಎ ನಾರಾಯಣ ಸ್ವಾಮಿ ಅಧಿಕಾರಿಗಳಿಗೆ ತಾಕೀತು ಮಾಡಿ ಸರಿಯಾದ ದಾಖಲೆ ಸಲ್ಲಿಸುವಂತೆ ಸೂಚಿಸಿದರು.