ಚಿತ್ರದುರ್ಗ: ಸಿಎಂ ಬಿಎಸ್‌ವೈ ಕೈಕಟ್ಟಿ ಹಾಕಿದಂತೆ ಅನ್ನಿಸುತ್ತಿದೆ. ಫೆಬ್ರುವರಿ 2ರೊಳಗೆ ಬೇಡಿಕೆ ಈಡೇರಿಸುವಂತೆ ಗಡುವು ನೀಡಿದ್ದೆವು. ಆದ್ರೆ, ಇದುವರೆಗೂ ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದಿಸಿಲ್ಲ ಎಂದು ಕೂಡಲಸಂಗಮ ಪಂಚಮಸಾಲಿ ಗುರು ಪೀರಾಧ್ಯಕ್ಷ ಜಯ ಬಸವ ಮೃತ್ಯುಂಜಯ ಶ್ರೀ ಕಳವಳ ವ್ಯಕ್ತಪಡಿಸಿದರು.
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಬೃಹತ್ ಪಾದಯಾತ್ರೆ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡದಿದ್ದರೆ, ಕೂಡಲಸಂಗಮ ಮಠಕ್ಕೆ ಸರ್ಕಾರ ನೀಡಿದ ಅನುದಾನ ಪತ್ರ ವಾಪಸ್ ನೀಡುತ್ತೇವೆ. ನಾಳೆ ಚಿತ್ರದುರ್ಗ ಡಿಸಿ ಕಚೇರಿ ಮೂಲಕ ಅನುದಾನ ಪತ್ರ ವಾಪಸ್ ನೀಡಲಾಗುವುದು ಎಂದರು.