ಕರ್ನಾಟಕ

karnataka

ETV Bharat / state

ಮಾಸ್ಕ್ ಬ್ಯಾಂಕ್ ನಿರ್ಮಿಸಿ ಎಲ್ಲಾ ಮಕ್ಕಳಿಗೂ ವಿತರಣೆ: ಡಿಡಿಪಿಐ ರವಿಶಂಕರ್ ರೆಡ್ಡಿ - ಜಿಪಂ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್

ಬಡ ಕುಟುಂಬದ ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ತಾವೇ ಸ್ಬತಃ ಹೊಲಿಗೆ ಯಂತ್ರದಿಂದ ತಯಾರಿಸಿದ 10 ಸಾವಿರ ಬಟ್ಟೆ ಮಾಸ್ಕ್‌ಗಳನ್ನು ಮಕ್ಕಳಿಗಾಗಿ ಜಿಪಂ ಮಾಜಿ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್ ವಿತರಿಸಿದ್ದಾರೆ.

Mask distribution
ಶಿಕ್ಷಣ ಇಲಾಖೆಗೆ ಮಾಸ್ಕ್ ನೀಡಿದ ಸಾರ್ವನಿಕರು

By

Published : Jun 24, 2020, 9:53 PM IST

ಚಿತ್ರದುರ್ಗ: ಕೊರೊನಾ ಭೀತಿ ನಡುವೆಯೇ ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ ರಾಜ್ಯ ಸರ್ಕಾರ ಎಸ್ಎಸ್ಎಲ್​ಸಿ ಪರೀಕ್ಷೆ ನಡೆಸಲು ಆದೇಶ ಹೊರಡಿಸಿದೆ. ಈ ನಡುವೆ ಮಕ್ಕಳ ಹಿತದೃಷ್ಟಿಯಿಂದ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಮಕ್ಕಳಿಗೆ ತಲುಪಿಸುವಂತೆ ಶಿಕ್ಷಣ ಇಲಾಖೆಗೆ ಮಾಸ್ಕ್​ಗಳನ್ನು ನೀಡುತ್ತಿದ್ದಾರೆ.

ಡಿಡಿಪಿಐ ರವಿಶಂಕರ್ ರೆಡ್ಡಿ
ಹೌದು, ನಾಳೆಯಿಂದ ನಡೆಯಲಿರುವ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಕೋಟೆ ನಾಡು ಶಿಕ್ಷಣ ಇಲಾಖೆ ಸಕಲ‌ ಸಿದ್ಧತೆ ಮಾಡಿಕೊಂಡಿದೆ. ದಿನೇ ದಿನೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ತಮ್ಮ ಮಕ್ಕಳಿಗೆ ಯಾವುದೇ ಅಪಾಯವಾಗದಂತೆ ಪರೀಕ್ಷೆ ಬರೆಯಲು ಪೋಷಕರೇ ಸ್ವತಃ ಸಾವಿರಾರು ಮಾಸ್ಕ್‌ಗಳನ್ನು ತಯಾರಿಸಿ ಶಿಕ್ಷಣ ಇಲಾಖೆಗೆ ನೀಡುತ್ತಿದ್ದಾರೆ. ಅಲ್ಲದೆ ಬಡ ಕುಟುಂಬದ ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ತಾವೇ ಸ್ಬತಃ ಹೊಲಿಗೆ ಯಂತ್ರದಿಂದ ತಯಾರಿಸಿದ 10 ಸಾವಿರ ಬಟ್ಟೆ ಮಾಸ್ಕ್‌ಗಳನ್ನು ಮಕ್ಕಳಿಗಾಗಿ ಜಿಪಂ ಮಾಜಿ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್ ವಿತರಿಸಿದ್ದಾರೆ. ಡಿಡಿಪಿಐ ರವಿಶಂಕರ್ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ಸುಮಾರು 60ರಿಂದ 70 ಸಾವಿರ ಮಾಸ್ಕ್​ಗಳು ಡಿಡಿಪಿಐ ಕಚೇರಿಗೆ ತಲುಪಿವೆ. ಅಲ್ಲದೆ ನಾಳೆ ಪರೀಕ್ಷೆ ಬರೆಯುವ ಮಕ್ಕಳಿಗೆ ಹೆಚ್ಚು ಮಾಸ್ಕ್ ನೀಡುವುದಕ್ಕಾಗಿ ಶಿಕ್ಷಣ ಇಲಾಖೆಯಲ್ಲೇ ಮಾಸ್ಕ್ ಬ್ಯಾಂಕ್ ಎಂದು ನಿರ್ಮಾಣ ಮಾಡಲಾಗಿದೆ. ನಮ್ಮ ಮಕ್ಕಳಿಗೆ ಪರೀಕ್ಷೆ ಬರೆಯುವಾಗ ಯಾವುದೇ ಲೋಪದೋಷಗಳು ಬರಬಾರದು ಎಂಬ ಉದ್ದೇಶದಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ABOUT THE AUTHOR

...view details