ಚಿತ್ರದುರ್ಗ :ಮುರುಘಾ ಮಠದಲ್ಲಿ ಮುರುಘಾ ಶರಣರ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ಜರುಗಿತು.
ಮುರುಘಾ ಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ - ಮುರುಘಾ ಮಠದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ
ಮುರುಘಾ ಮಠದಲ್ಲಿ ಮುರುಘಾ ಶರಣರ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ಜರುಗಿತು.
ಮುರುಘಾ ಮಠದಲ್ಲಿ ಕಳೆದ 30 ವರ್ಷಗಳಿಂದ ಒಂದು ತಿಂಗಳ ಕಾಲ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆದುಕೊಂಡು ಬರುತ್ತಿದೆ. ಪ್ರತಿ ತಿಂಗಳ 5ನೇ ತಾರೀಕು ಅಮಾವಾಸ್ಯೆ, ಗ್ರಹಣ, ಮಂಗಳವಾರ ಏನೇ ಇದ್ದರೂ ಮುರುಘಾ ಮಠದ ಅನುಭವ ಮಂಟಪದಲ್ಲಿ ಹತ್ತಾರು ಜೋಡಿಗಳು ಹಸೆಮಣೆ ಏರುತ್ತಾರೆ.
ಇಂದು 28 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಪಂಚಾಂಗ, ರಾಹುಕಾಲ, ಗುಳಿಗಕಾಲ, ಯಮಗಂಡ ಕಾಲ ಇವೆಲ್ಲವನ್ನೂ ಲೆಕ್ಕಕ್ಕಿಡದೆ ಮದುವೆ ಮಾಡಿಸುತ್ತಾ ಮಠ ಸಾಮಾಜಿಕ ಕಾರ್ಯವನ್ನು ನಡೆಸುತ್ತಾ ಬರುತ್ತಿದೆ. ವಿಶೇಷವಾಗಿ ಇಂದು ಪ್ರತಿ ಜೋಡಿಗೂ ಬೆಳ್ಳಿಯ ಕಾಲುಂಗರ ಹಾಗೂ ವಧು-ವರರಿಗೆ ಹೊಸ ವಸ್ತ್ರಗಳನ್ನು ಮಠದಿಂದಲೇ ನೀಡುವ ಮೂಲಕ ಮುರುಘಾ ಶರಣರು ನವ ಜೋಡಿಗಳಿಗೆ ಆಶೀರ್ವದಿಸಿದರು.