ಚಿತ್ರದುರ್ಗ :ಗಾಂಜಾ ಸೇವನೆ ಪ್ರಕರಣ ಸಂಬಂಧ ವಿಚಾರಣೆಗೆಂದು ಪೊಲೀಸರು ವಶಕ್ಕೆ ಪಡೆದಿದ್ದ ವ್ಯಕ್ತಿ ಕುಸಿದು ಬಿದ್ದು ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಆರೋಪಿ ಶಿವಾಜಿರಾವ್ ಎಂಬಾತನನ್ನು ಗಾಂಜಾ ಸೇವನೆ ಹಾಗೂ ಮಾರಾಟ ಆರೋಪದಡಿ ಪೊಲೀಸರು ನಿನ್ನೆ ಸಂಜೆ ವಶಕ್ಕೆ ಪಡೆದು ಚಿತ್ರದುರ್ಗ ನಗರ ಠಾಣೆಗೆ ಕರೆತಂದಿದ್ದಾರೆ.
ವಿಚಾರಣೆಯ ವೇಳೆ ಶಿವಾಜಿರಾವ್ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಿದಾಗ ಸಾವನ್ನಪ್ಪಿದ್ದಾನೆ. ಈ ಸಂಬಂಧ ಮೃತನ ಪತ್ನಿ, ವಿಚಾರಣೆ ವೇಳೆ ಪೊಲೀಸರು ವಿಪರೀತ ಹಿಂಸೆ ನೀಡಿ ಸಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕುಟುಂಬಸ್ಥರು ಹೇಳೋದೇನು? :ಮೃತ ಶಿವಾಜಿರಾವ್ ಗಾರೆ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ. ಮಫ್ತಿಯಲ್ಲಿ ಮನೆಗೆ ಬಂದ ಇಬ್ಬರು ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡದೆ ವಿಚಾರಣೆ ಹೆಸರಿನಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ ಬಳಿಕ ಲಾಕಪ್ ಡೆತ್ ಮಾಡಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ಮೃತನ ಪತ್ನಿ ಗೀತಾಬಾಯಿ ಮನವಿ ಮಾಡಿದ್ದಾರೆ.