ಕರ್ನಾಟಕ

karnataka

ETV Bharat / state

ತಲೆಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿ ಕೊಲೆ, ಪ್ರಕರಣದಲ್ಲಿ ಅಣ್ಣನೇ ಆರೋಪಿ - chitradurga

ಮೃತ ಶಿವು ನಿತ್ಯ ಮದ್ಯ ಸೇವಿಸಿ ಮನೆಯಲ್ಲಿದ್ದ ವಸ್ತುಗಳನ್ನು ಮಾರಾಟ ಮಾಡುವುದು, ಅಡ ಇಡುತ್ತಿದ್ದನಂತೆ. ಈ ವಿಚಾರಕ್ಕೆ ಮನೆಯಲ್ಲಿ ಹಲವು ಬಾರಿ ಜಗಳ ಕೂಡ ನಡೆದಿದೆ. ಇದರಿಂದ ರೋಸಿ ಹೋಗಿದ್ದು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವುದಾಗಿ ಮೃತನ ಅಣ್ಣ ರವಿ ಒಪ್ಪಿಕೊಂಡಿದ್ದಾನೆ

man murdered
ಶಿವು ಮೃತ ವ್ಯಕ್ತಿ

By

Published : May 3, 2021, 10:08 AM IST

ಚಿತ್ರದುರ್ಗ:ತಲೆ ಮೇಲೆ ಸೈಜುಗಲ್ಲು ಎತ್ತಿ ಹಾಕಿ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಕೊಲೆಗೈದಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದ ಬಸ್ ನಿಲ್ದಾಣದ ಎದುರು ಇರುವ ಇಂದಿರಾ ಕ್ಯಾಂಟೀನ್ ಬಳಿ ನಡೆದಿದೆ. ಕೊಲೆ ಮಾಡಿ ತಪ್ಪಿಸಿಕೊಂಡು ಓಡಾಡುತ್ತಿದ್ದ ಆರೋಪಿಯನ್ನು 24 ಗಂಟೆಯೊಳಗೆ ಹಿರಿಯೂರು ಪೊಲೀಸರು ಬಂಧಿಸಿದ್ದಾರೆ.

ಹಿರಿಯೂರು ನಗರದ ಕೆ.ಎಂ.ಕೊಟ್ಟಿಗೆಯಲ್ಲಿ ವಾಸಿವಾಗಿದ್ದ ದಾವಣಗೆರೆ ಮೂಲದ ಶಿವು (30) ಮೃತ ವ್ಯಕ್ತಿ. ನಿನ್ನೆ ರಾತ್ರಿ ಕ್ಯಾಂಟೀನ್ ಬಂದ್ ಮಾಡಿ ಹೋಗುವ ವೇಳೆ ಕ್ಯಾಂಟೀನ್ ಮುಂದೆ ಮೃತ ಶಿವು, ರವಿ ಮತ್ತು ಓರ್ವ ಮಹಿಳೆ ಗಲಾಟೆ ಮಾಡುತ್ತಿದ್ದರು. ಮುಂಜಾನೆ ನೋಡಿದರೆ ವ್ಯಕ್ತಿ ಶವವಾಗಿ ಬಿದ್ದಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ರಾತ್ರಿ ಗಲಾಟೆ ಮಾಡಿಕೊಂಡಿದ್ದ ಶಿವು ಬೆಳಗ್ಗೆ ಶವವಾಗಿ ಬಿದ್ದಿದ್ದಾನೆ. ಅವನ ತಲೆಯ ಪಕ್ಕದಲ್ಲಿ ಸೈಜುಗಲ್ಲು, ಹಳದಿ ಬಣ್ಣದ ಕೈಚೀಲವಿದ್ದು, ಅಲ್ಲಲ್ಲಿ ರಕ್ತದ ಕಲೆಗಳಿದ್ದವು ಎಂದು ಇಂದಿರಾ ಕ್ಯಾಂಟೀನ್ ನೋಡಿಕೊಳ್ಳುತ್ತಿದ್ದ ಚೇತನ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಸ್ಥಳಕ್ಕೆ ಬಂದ ಎಸ್​ಪಿ ರಾಧಿಕಾ, ಡಿವೈಎಸ್​ಪಿ ರೋಷನ್ ಜಮೀರ್, ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಜಾಡು ಹಿಡಿದು ಮೃತ ಶಿವು ಅಣ್ಣ ರವಿಯೇ ಕೊಲೆ ಮಾಡಿರುವುದಾಗಿ ಪತ್ತೆ ಹಚ್ಚಿದ್ದಾರೆ.

ಮೃತ ಶಿವು ನಿತ್ಯ ಮದ್ಯ ಸೇವಿಸಿ ಮನೆಯಲ್ಲಿದ್ದ ವಸ್ತುಗಳನ್ನು ಮಾರಾಟ ಮಾಡುವುದು, ಅಡ ಇಡುತ್ತಿದ್ದನಂತೆ. ಈ ವಿಚಾರಕ್ಕೆ ಮನೆಯಲ್ಲಿ ಹಲವು ಬಾರಿ ಜಗಳ ಕೂಡ ನಡೆದಿದೆ. ಇದರಿಂದ ರೋಸಿ ಹೋಗಿದ್ದು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವುದಾಗಿ ಆರೋಪಿ ರವಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ABOUT THE AUTHOR

...view details