ಕರ್ನಾಟಕ

karnataka

ETV Bharat / state

ಟ್ರ್ಯಾಕ್ಟರ್‌ಗೆ ಬೈಕ್​ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು - ರಸ್ತೆ ಬದಿಯಲ್ಲಿ ನಿಂತ ಟ್ರ್ಯಾಕ್ಟರ್‌ಗೆ ಬೈಕ್​ ಡಿಕ್ಕಿ

ನುಲೇನೂರು ಗೇಟ್​ನಲ್ಲಿ ನಡೆದ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ತಡರಾತ್ರಿ ಸಮಯದಲ್ಲಿ ವೇಗವಾಗಿ ಬಂದ ಬೈಕ್​ ಟ್ರ್ಯಾಕ್ಟರ್‌ಗೆ ಡಿಕ್ಕಿಯಾಗಿದೆ.

chitradurga
ಚಿತ್ರದುರ್ಗ

By

Published : Jan 6, 2021, 12:53 PM IST

ಚಿತ್ರದುರ್ಗ: ರಸ್ತೆ ಬದಿಯಲ್ಲಿ ನಿಂತ ಟ್ರ್ಯಾಕ್ಟರ್‌ಗೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಹೊಳಲ್ಕೆರೆ ತಾಲೂಕಿನ ಟಿ. ನುಲೇನೂರಿನಲ್ಲಿ ತಡರಾತ್ರಿ ನಡೆದಿದೆ.

ಟ್ರ್ಯಾಕ್ಟರ್‌ಗೆ ಡಿಕ್ಕಿಯಾದ ಬೈಕ್​

ಶಿವಗಂಗಾ ಮೂಲದ ವಿರೇಶ್ (22) ಮೃತ ದುರ್ದೈವಿಯಾಗಿದ್ದು, ರಸ್ತೆ ಬದಿ ನಿಲ್ಲಿಸಿದ ಟ್ರ್ಯಾಕ್ಟರ್‌ ದ್ವಿಚಕ್ರ ವಾಹನ ಡಿಕ್ಕಿಯಾಗಿದ್ದು, ಸ್ಥಳದಲ್ಲಿ ಬೈಕ್ ಸವಾರ ಸಾವಿಗೀಡಾಗಿದ್ದಾನೆ. ಅಪಘಾತದ ಬಳಿಕ ಯುವಕನ ಕಾಲಿನ ಮೇಲೆ ರಸ್ತೆಯಲ್ಲಿ ಬಂದ ಇನ್ನೊಂದು ವಾಹನ ಕೂಡ ಹರಿದ ಶಂಕೆ ವ್ಯಕ್ತವಾಗುತ್ತಿದ್ದು, ಘಟನೆ ಸ್ಥಳದಲ್ಲಿದ್ದ ಜನರನ್ನ ಒಂದು ಕ್ಷಣ ಬೆಚ್ಚಿ ಬೀಳಿಸುವಂತಾಗಿದೆ.

ಇನ್ನು ನುಲೇನೂರು ಗೇಟ್​ನಲ್ಲಿ ನಡೆದ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ತಡರಾತ್ರಿ ಸಮಯದಲ್ಲಿ ವೇಗವಾಗಿ ಬಂದ ಬೈಕ್ ಟ್ರ್ಯಾಕ್ಟರ್‌ಗೆ ಡಿಕ್ಕಿಯಾಗಿದೆ. ಚಿತ್ರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ:ನಿಲ್ಲದ ಕಾಮುಕರ ಅಟ್ಟಹಾಸ : 50 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಹತ್ಯೆ

ಇತ್ತ ನುಲೇನೂರು ಗೇಟ್ ಬಳಿ ಪದೆ ಪದೇ ಅಪಘಾತ ಪ್ರಕರಣಗಳು ಬೆಳಕಿಗೆ ಬರುತ್ತಿರುವುದಿಂದ ಸ್ಥಳೀಯರು ಕೂಡಾ ಬೆಚ್ಚಿಬಿದ್ದಿದ್ದು, ಜಿಲ್ಲಾಡಳಿತ ಅಪಘಾತ ತಡೆಗೆ ಸೂಕ್ತ ಕ್ರಮಕ್ಕೆ ಮುಂದಾಗುವಂತೆ ಒತ್ತಾಯಿಸುತ್ತಿದ್ದಾರೆ.

ABOUT THE AUTHOR

...view details