ಕರ್ನಾಟಕ

karnataka

ETV Bharat / state

ಚಿತ್ರದುರ್ಗದ ಭೋಜನಕೂಟದಲ್ಲಿ ಒಬ್ಬಂಟಿಯಾದ್ರಾ ಶಾಸಕ ಮಹೇಶ್ ಕುಮಟಳ್ಳಿ? - ಶಾಸಕ ರಮೇಶ್​ ಜಾರಕಿಹೊಳಿ

ಸಂಸದ ನಾರಾಯಣಸ್ವಾಮಿ ಆಯೋಜಿಸಿದ್ದ ಉಚಿತ ಭೋಜನ ವ್ಯವಸ್ಥೆಯ ಸ್ಥಳಕ್ಕೆ ಸಚಿವ ರಮೇಶ್​ ಜಾರಕಿಹೊಳಿ ಅವರೊಂದಿಗೆ ಶಾಸಕ ಮಹೇಶ್ ಕುಮಟಳ್ಳಿ ಸಹ ಭೇಟಿ ನೀಡಿದ್ದರು. ಆದರೆ ಈ ವೇಳೆ ಬಿಜೆಪಿ ಕಾರ್ಯಕರ್ತರು ಕುಮಟಳ್ಳಿ ಅವರನ್ನು ತಿರುಗಿಯೂ ನೋಡದ್ದಕ್ಕೆ ಎಲ್ಲರಿಂದ ದೂರ ಉಳಿದು ಒಬ್ಬರೇ ನಿಂತಿದ್ದರು.

Mahesh Kumaratalli seems alone in Chitradurga dinner fest
ಚಿತ್ರದುರ್ಗದ ಭೋಜನಕೂಟದಲ್ಲಿ ಒಬ್ಬಂಟಿಯಾದ ಶಾಸಕ ಮಹೇಶ್ ಕುಮಟಳ್ಳಿ

By

Published : Apr 23, 2020, 7:08 PM IST

ಚಿತ್ರದುರ್ಗ:ರಾಜ್ಯ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರೆಬಲ್ ಶಾಸಕರಲ್ಲಿ ಮಹೇಶ್ ಕುಮಟಳ್ಳಿ ಕೂಡ ಪ್ರಮುಖರು. ಅದರೆ ಅವರಿಗೆ ಬಿಜೆಪಿ ಕಾರ್ಯಕರ್ತರು ತಿರುಗಿಯೂ ನೋಡದೆ ಕಡೆಗಣಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನಗರದಲ್ಲಿ ಸಂಸದ ನಾರಾಯಣಸ್ವಾಮಿ ಅವರು ಬಡ ಜನತೆಗೆ ಆಯೋಜಿಸಿದ್ದ ಉಚಿತ ಭೋಜನ ವ್ಯವಸ್ಥೆಯ ಸ್ಥಳಕ್ಕೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಭೇಟಿ ನೀಡಿದ್ದರು. ಸಚಿವರೊಂದಿಗೆ ಶಾಸಕ ಮಹೇಶ್ ಕುಮಟಳ್ಳಿ ಸಹ ಭೇಟಿ ನೀಡಿದ್ದರು. ಆದ್ರೆ ಈ ವೇಳೆ ಬಿಜೆಪಿ ಕಾರ್ಯಕರ್ತರು ಕುಮಟಳ್ಳಿ ಅವರನ್ನು ತಿರುಗಿ ನೋಡಲಿಲ್ಲ. ಹಾಗಾಗಿ ಕುಮಟಳ್ಳಿಯವರು ಸಚಿವರು ಮತ್ತು ಸಂಸದರನ್ನು ಮುಂದೆ ಬಿಟ್ಟು ಪೊಲೀಸರೊಂದಿಗೆ ಮಾತನಾಡುತ್ತ ನಿಂತಿದ್ದರು.

ಚಿತ್ರದುರ್ಗದ ಭೋಜನಕೂಟದಲ್ಲಿ ಒಬ್ಬಂಟಿಯಾದ ಶಾಸಕ ಮಹೇಶ್ ಕುಮಟಳ್ಳಿ

ಉಚಿತ ಭೋಜನ ಕೇಂದ್ರಕ್ಕೆ ಸಚಿವ ರಮೇಶ್ ಜಾರಕಿಹೊಳಿ ಭೇಟಿ ವೇಳೆ ಆಗಮಿಸಿದ ಶಾಸಕ ಕುಮಟಹಳ್ಳಿ ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಶಾಲೆಯ ಮೈದಾನದಲ್ಲಿ ಯಾರೋಬ್ಬರು ಮಾತನಾಡಿಸದೆ ಇದ್ದಾಗ ಒಂಟಿಯಾಗಿ ನಿಂತರು. ಸಚಿವ ರಮೇಶ್ ಜಾರಕಿಹೊಳಿ ಸಂಸದರ ಭೋಜನ ಕೂಟದಿಂದ ವಾಪಸ್ ತೆರಳುವವರೆಗೂ ಶಾಸಕ ಕುಮಟಳ್ಳಿ ಒಬ್ಬರೇ ನಿಂತಿದ್ದರು.

ABOUT THE AUTHOR

...view details