ಚಿತ್ರದುರ್ಗ:ರಾಜ್ಯದಲ್ಲಿ ಶೈಕ್ಷಣಿಕ ಪ್ರಗತಿಗೆ ಮಠಗಳ ಕೊಡುಗೆ ಅಪಾರ. ಅದರೆ, ಮಠಗಳಿಗೆ ನಾನು ಏನಾದರೂ ಕೊಡೋಣ ಅಂದ್ರೆ, ನನಗೆ ಆ ಅಧಿಕಾರವಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಪರೋಕ್ಷವಾಗಿ ತನಗೆ ನೀಡಲಾದ ಖಾತೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಸಚಿವ ಮಾಧುಸ್ವಾಮಿ ಹೀಗೆ ಹೇಳಿದ್ದೇಕೆ? ಅವ್ರಿಗೆ ಸಂಸದೀಯ ಖಾತೆ ಬಗ್ಗೆ ಅಸಮಾಧಾನ ಇದೆಯೇ? - ಸಚಿವ ಜೆ.ಸಿ.ಮಾಧುಸ್ವಾಮಿ
ಮಠಗಳಿಗೆ ಏನಾದರೂ ಕೊಡುವ ಅಧಿಕಾರ ನನಗಿಲ್ಲ. ಆ ಜವಾಬ್ದಾರಿ ಬೇರೆ ಮಂತ್ರಿಗಳ ಬಳಿ ಇದೆ ಎಂದು ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ರು. ಈ ಮೂಲಕ ತನಗೆ ಕೊಟ್ಟಿರುವ ಖಾತೆಯ ಬಗ್ಗೆ ಅವರು ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ.

ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿದರು.
ಸಚಿವ ಜೆ.ಸಿ.ಮಾಧುಸ್ವಾಮಿ
ಚಿತ್ರದುರ್ಗದಲ್ಲಿ ಮಾದಾರ ಚನ್ನಯ್ಯ ಮಠದ ಆವರಣದಲ್ಲಿ ನಡೆಯುತ್ತಿರುವ ದಲಿತ, ಹಿಂದುಳಿದ ಮಠಾಧೀಶರ ಒಕ್ಕೂಟದ ಸಭೆ ಉದ್ದೇಶಿಸಿ ಅವರು ಮಾತನಾಡಿದ್ರು.
ಮಠಮಾನ್ಯಗಳಿಗೆ ಕೊಡುಗೆ ನೀಡಬೇಕೆಂಬ ಹಂಬಲ ಇದೆ. ಅದರೆ ಆ ಅಧಿಕಾರವನ್ನು ದೇವರು ನನಗೆ ಕೊಟ್ಟಿಲ್ಲ. ಯಡಿಯೂರಪ್ಪನವರೂ ಕೊಟ್ಟಿಲ್ಲ. ಸಚಿವರಾದ ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ, ಶ್ರೀರಾಮುಲು ಅವರಿಗೆ ಆ ಅಧಿಕಾರ ಇದೆ ಎಂದು ಪರೋಕ್ಷವಾಗಿ ನೋವು ತೋಡಿಕೊಂಡರು.