ಕರ್ನಾಟಕ

karnataka

ETV Bharat / state

ಸಸಿ ನೆಡುವ ಮೂಲಕ ಸೈನಿಕರಿಗೆ ಗೌರವ ಸಲ್ಲಿಸಿದ ಮಾದಾರ ಚೆನ್ನಯ್ಯ ಶ್ರೀ - Madara Chennaiah paid tribute to the soldiers by planting saplings

ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿ ಸಂಭವಿಸಿ ಇಂದಿಗೆ ಒಂದು ವರ್ಷ ಕಳೆದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಮೌನಾಚರಣೆ ಮಾಡುವ ಮೂಲಕ ಸೈನಿಕರಿಗೆ ಗೌರವ ಸೂಚಿಸಲಾಯಿತು.

ಮಾದಾರ ಚೆನ್ನಯ್ಯ ಶ್ರೀಗಳು
ಮಾದಾರ ಚೆನ್ನಯ್ಯ ಶ್ರೀಗಳು

By

Published : Feb 14, 2020, 7:02 PM IST

ಚಿತ್ರದುರ್ಗ:ಪುಲ್ವಾಮ ಘಟನೆ ಸಂಭವಿಸಿ ಇಂದಿಗೆ ಒಂದು ವರ್ಷ ಕಳೆದ ಹಿನ್ನೆಲೆಯಲ್ಲಿ ಕಂಥಕ ಫೌಂಡೇಶನ್ ವತಿಯಿಂದ ಮಾದಾರ ಗುರುಪೀಠದ ಮಾದಾರಚೆನ್ನಯ್ಯ ಸ್ವಾಮೀಜಿ ಒನಕೆ ಓಬವ್ವ ವೃತ್ತದಲ್ಲಿ ಮೌನಾಚರಣೆ ಮಾಡಿ, ಗಿಡ ನೆಡುವ ಮೂಲಕ ಸೈನಿಕರಿಗೆ ಗೌರವ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ನಮ್ಮ ದೇಶದಲ್ಲಿ ದೇವರ ನಂತರ ಪೂಜೆ ಸಲ್ಲುಸುವುದು ದೇಶದ ಬೆನ್ನೆಲುಬಾದ ರೈತರಿಗೆ ಮತ್ತು ದೇಶವನ್ನು ಕಾಯುವ ಯೋಧರಿಗೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸಸಿ ನೆಡುವ ಮೂಲಕ ಸೈನಿಕರಿಗೆ ಗೌರವ ಸಲ್ಲಿಸಿದ ಶ್ರೀಗಳು

ಪುಲ್ವಾಮ ದಾಳಿಯಲ್ಲಿ ನಮ್ಮ ಯೋಧರು ವೀರ ಮರಣ ಹೊಂದಿದರು. ಅವರನ್ನು ಸ್ಮರಣೆ ಮಾಡುವುದು ಭಾರತೀಯರಾಗಿರುವ ನಮ್ಮೆಲ್ಲರ ಕರ್ತವ್ಯ. ಅವರುಗಳ ಹೆಸರು ಚಿರಸ್ಥಾಯಿಯಾಗಬೇಕು ಎಂಬ ನಿಟ್ಟಿನಲ್ಲಿ ಕಂಥಕ ಪೌಂಡೇಶನ್​ನವರು ಸಸಿ ನೆಡುವ ಕಾರ್ಯಕ್ರಮ ಮಾಡುತ್ತಿರುವುದು ಉತ್ತಮ ಕಾರ್ಯ ಶ್ಲಾಘಿಸಿದರು.

ABOUT THE AUTHOR

...view details