ಕರ್ನಾಟಕ

karnataka

ETV Bharat / state

ವಿವಾಹಿತನ ಜತೆ ಪ್ರೇಮ ಸಂಬಂಧ.. ಪ್ರೇಯಸಿಗೆ ವಿಷ ಕುಡಿಸಿ ನೇಣಿಗೆ ಶರಣಾದ ಪ್ರಿಯಕರ - Lovers death in Chitradurga news

ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಪರಶುರಾಮಪುರ ಗ್ರಾಮದಲ್ಲಿ ಪ್ರೇಯಸಿಗೆ ವಿಷ ಕುಡಿಸಿ ಪ್ರಿಯಕರನು ನೇಣಿಗೆ ಶರಣಾಗಿರುವ ಘಟನೆ ಜರುಗಿದ್ದು, ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Lovers death in Chitradurga
ವಿವಾಹಿತನ ಜತೆ ಪ್ರೇಮ ಸಂಬಂಧ

By

Published : Aug 17, 2021, 5:29 PM IST

Updated : Aug 17, 2021, 6:59 PM IST

ಚಿತ್ರದುರ್ಗ: ಪ್ರೇಯಸಿಗೆ ವಿಷ ಕುಡಿಸಿ ಪ್ರಿಯಕರನು ನೇಣಿಗೆ ಶರಣಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕೂನಿಕೆರೆ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಎಸ್ಪಿ ರಾಧಿಕಾ ಹೇಳಿಕೆ

ಚಳ್ಳಕೆರೆ ತಾಲೂಕಿನ ಪರಶುರಾಮಪುರ ಗ್ರಾಮದ ತಿಪ್ಪೇಸ್ವಾಮಿ (32), ಹಿರಿಯೂರು ತಾಲೂಕಿನ ಉಡುವಳ್ಳಿ ನಿವಾಸಿ ಪುಷ್ಪಲತಾ (21) ಮೃತ ಪ್ರೇಮಿಗಳಾಗಿದ್ದಾರೆ. ತಿಪ್ಪೇಸ್ವಾಮಿ ಈಗಾಗಲೇ ಮದುವೆಯಾಗಿದ್ದು, ಮಕ್ಕಳು ಕೂಡ ಇದ್ದಾರೆ. ಆದರೂ ವಿವಾಹಿತನ ಪ್ರೇಮ ಪಾಶಕ್ಕೆ ಸಿಲುಕಿದ್ದ ಯುವತಿಯ ದುರಂತ ಅಂತ್ಯವಾದಂತಾಗಿದೆ. ತಿಪ್ಪೇಸ್ವಾಮಿ ಜೊತೆ ವಿವಾಹ ಮಾಡುವಂತೆ ಯುವತಿ ತನ್ನ ಪೋಷಕರಿಗೆ ಪಟ್ಟು ಹಿಡಿದಿದ್ದಳು. ಆದರೆ, ವಿವಾಹಿತನ ಜೊತೆ ಮತ್ತೊಂದು ವಿವಾಹ ಮಾಡಲು ಪೋಷಕರು ನಿರಾಕರಿಸಿದ್ದರು.

ಕಳೆದ ಮೂರು ದಿನದ ಹಿಂದೆ ಯುವತಿ ಮನೆ ಬಿಟ್ಟು ಹೋಗಿದ್ದು, ಈಗ ಪ್ರಿಯಕರನ ಜೊತೆ ಶವವಾಗಿ ಪತ್ತೆಯಾಗಿದ್ದಾಳೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಓದಿ:ಮಗ, ಸೊಸೆ, ಮೊಮ್ಮಗನಿಗೆ ಥಳಿಸುತ್ತಿರುವ ವ್ಯಕ್ತಿ - ವಿಡಿಯೋ ವೈರಲ್​

Last Updated : Aug 17, 2021, 6:59 PM IST

ABOUT THE AUTHOR

...view details