ಚಿತ್ರದುರ್ಗ :ನಿಂತಿದ್ದ ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ನಗರದ ಡಾನ್ ಬೋಸ್ಕೋ ಶಾಲೆ ಮುಂಭಾಗದ ಎನ್‌ಹೆಚ್-48 ಹೆದ್ದಾರಿಯಲ್ಲಿ ನಡೆದಿದೆ.
PNC ಇನ್‍ಪ್ರೋಟೆಕ್ ಕಂಪನಿಯ ಕೆಲಸಗಾರರಾದ ಆಯಿತೋಳ ಗ್ರಾಮದ ಕರಿಯಪ್ಪ ತಂದೆ (55), ಕರಿಯಪ್ಪ (35), ಸ್ಥಳದಲ್ಲೇ ಮೃತಪಟ್ಟರೆ, ಸೀಬಾರ ಗ್ರಾಮದ ನಾಗರಾಜ್ (35) ಎಂಬುವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ರಾಮಚಂದ್ರಪ್ಪ, ಶೈಲರಾಧ್ಯ, ಕರಿಯಪ್ಪ, ಮಲ್ಲನಗೌಡ ಎಂಬ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಅಪಘಾತದ ಕುರಿತು ಮಾಹಿತಿ ನೀಡಿದ ಎಸ್ಪಿ ರಾಧಿಕಾ.. ಬೆಂಗಳೂರಿನಿಂದ ದಾವಣಗೆರೆ ಕಡೆಗೆ ವೇಗವಾಗಿ ಬರುತ್ತಿದ್ದ ಲಾರಿ ಚಾಲಕ, ತನ್ನ ಅಜಾಗರೂಕತೆಯಿಂದ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಪಕ್ಕದಲ್ಲಿ ಹೈವೇ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ಲಾರಿ ಹರಿದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಚಿತ್ರದುರ್ಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.