ಕರ್ನಾಟಕ

karnataka

ETV Bharat / state

ಎಡಿಜಿಪಿ ರಾಮಚಂದ್ರರಾವ್ ಕಾರಿಗೆ ಲಾರಿ ಡಿಕ್ಕಿ: ಪ್ರಾಣಾಪಾಯದಿಂದ ಪಾರು - ಚಿತ್ರದುರ್ಗ ರಸ್ತೆ ಅಪಘಾತ ಸುದ್ದಿ

ಎಡಿಜಿಪಿ ರಾಮಚಂದ್ರರಾವ್ ಚಲಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಘಟನೆ ಚಿತ್ರದುರ್ಗ ತಾಲೂಕಿನ ಕೊಳಾಳ್ ಗ್ರಾಮದ ಬಳಿ ನಡೆದಿದೆ.

ಎಡಿಜಿಪಿ ರಾಮಚಂದ್ರರಾವ್ ಕಾರಿಗೆ ಲಾರಿ ಡಿಕ್ಕಿ

By

Published : Nov 20, 2019, 4:01 PM IST

ಚಿತ್ರದುರ್ಗ: ಎಡಿಜಿಪಿ ರಾಮಚಂದ್ರರಾವ್ ಸಂಚರಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಘಟನೆ ಚಿತ್ರದುರ್ಗ ತಾಲೂಕಿನ ಕೊಳಾಳ್ ಗ್ರಾಮದ ಬಳಿ ನಡೆದಿದೆ.

ಎಡಿಜಿಪಿ ರಾಮಚಂದ್ರರಾವ್ ಬೆಂಗಳೂರಿನಿಂದ ದಾವಣಗೆರೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ‌ ಬಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರಿ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಈ ಸಂಬಂಧ ಭರಮಸಾಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details