ಕರ್ನಾಟಕ

karnataka

ETV Bharat / state

ಪ್ರಕೃತಿಯಲ್ಲಿ ಒಂದಿಲ್ಲೊಂದು ವಿಸ್ಮಯ: ಬೇವಿನ ಮರದಲ್ಲಿ ಮೂಡಿದನೇ ವಿಘ್ನನಿವಾರಕ?- VIDEO - ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಭೂಮಾಪನ ಇಲಾಖೆ

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಭೂಮಾಪನ ಇಲಾಖೆಯ ಆವರಣದಲ್ಲಿರುವ ಬೇವಿನ ಮರದಲ್ಲಿ ಗಣೇಶನ ಮುಖ ಹೊಲುವಂತಹ ಚಿತ್ರ ಮೂಡಿರುವುದನ್ನು ಕಂಡು ಜನರು ಪೂಜೆ ಸಲ್ಲಿಸುತ್ತಿದ್ದಾರೆ.

Lord ganesha idol found in a neem tree
ಬೇವಿನ ಮರದಲ್ಲಿ ಮೂಡಿದ ವಿಘ್ನನಿವಾರಕ

By

Published : Sep 29, 2021, 11:56 AM IST

ಚಿತ್ರದುರ್ಗ: ಪ್ರಕೃತಿಯಲ್ಲಿ ನಾವು ಹಲವಾರು ವಿಸ್ಮಯಗಳನ್ನು ನೋಡಿರುತ್ತೇವೆ, ಕೇಳಿರುತ್ತೇವೆ. ಅದೇ ರೀತಿಯ ಘಟನೆಯೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಬೇವಿನ ಮರದಲ್ಲಿ ಗಣೇಶನ ಮುಖ ಹೊಲುವಂತಹ ಚಿತ್ರವನ್ನು ನೋಡಿ ಇಲ್ಲಿನ ಜನ ಬೆರಗಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಭೂಮಾಪನ ಇಲಾಖೆಯ ಆವರಣದಲ್ಲಿರುವ ಬೇವಿನ ಮರದಲ್ಲಿ ವಿಘ್ನನಿವಾರಕನ ಮುಖ ಹೋಲುವಂತಹ ಚಿತ್ರ ಮೂಡಿದೆ. ಈ ವಿಚಿತ್ರವನ್ನು ಕಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಚೇರಿಯಲ್ಲಿ ಪೂಜೆ ಮಾಡುವಾಗ ಬೇವಿನ ಮರದಲ್ಲಿರುವ ಗಣೇಶನ ಆಕೃತಿಗೂ ಪೂಜೆ ಸಲ್ಲಿಸುತ್ತಿದ್ದಾರೆ.

ಬೇವಿನ ಮರದಲ್ಲಿ ಮೂಡಿದ ಗಣೇಶನ ಮೂರ್ತಿ

ಇಲ್ಲಿನ ಸಿಬ್ಬಂದಿ ಹೇಳುವ ಪ್ರಕಾರ, 'ಸುಮಾರು ದಿನಗಳಿಂದ ಗಣೇಶನ ಮುಖ ಹೋಲುವಂತಹ ಸೊಂಡಿಲು, ಕಣ್ಣು, ಕಿವಿ ಇರುವ ರೂಪ ಈ ಮರದಲ್ಲಿ ಮೂಡಿದೆ. ಇದನ್ನು ಗಮನಿಸಿದ ಭಕ್ತರು ಗಣೇಶ ಇಲ್ಲಿಯೇ ನೆಲೆಸಿದ್ದಾನೆ ಎಂದು ನಂಬಿ ಭಕ್ತಿಯಿಂದ ದಿನನಿತ್ಯ ಪೂಜೆ ಮಾಡುತ್ತಿದ್ದಾರೆ ಎಂದಿದ್ದಾರೆ.

ABOUT THE AUTHOR

...view details