ಚಿತ್ರದುರ್ಗ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಮಾಹಿತಿ ಹಾಗೂ ನೀತಿ ಸಂಹಿತೆ ಉಲ್ಲಂಘನೆ ಕುರಿತು ಯಾವುದೇ ದೂರು ಸಲ್ಲಿಸಲು ಸಹಾಯವಾಣಿ 1950 ಪ್ರಾರಂಭಗೊಂಡಿದ್ದು, ಇದರ ವ್ಯಾಪಕ ಪ್ರಚಾರಕ್ಕೆ ತಮ್ಮದೇ ಸರ್ಕಾರಿ ವಾಹನಕ್ಕೆ ಸ್ಟಿಕ್ಕರ್ ಅಳವಡಿಸುವ ಮೂಲಕ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಚಾಲನೆ ನೀಡಿದರು.
ಲೋಕಸಭಾ ಚುನಾವಣೆ: ತಮ್ಮದೇ ಸರ್ಕಾರಿ ವಾಹನಕ್ಕೆ ಸಹಾಯವಾಣಿ ಸ್ಟಿಕ್ಕರ್ ಅಂಟಿಸಿದ ಡಿಸಿ - ಸಾರ್ವಜನಿಕರಲ್ಲಿ
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿಗಳು ತಮ್ಮ ಸರ್ಕಾರಿ ವಾಹನಕ್ಕೆ 1950 ಸಹಾಯವಾಣಿ ಕುರಿತ ಪೋಸ್ಟರ್ ಸ್ಟಿಕ್ಕರ್ ಅಳವಡಿಸಿ ಚಾಲನೆ ನೀಡಿದರು
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿಗಳು ತಮ್ಮ ಸರ್ಕಾರಿ ವಾಹನಕ್ಕೆ 1950 ಸಹಾಯವಾಣಿ ಕುರಿತ ಪೋಸ್ಟರ್ ಸ್ಟಿಕ್ಕರ್ ಅಳವಡಿಸಿ ಚಾಲನೆ ನೀಡಿದರು. ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದ ವತಿಯಿಂದ ಮತದಾರರ ದೂರುಗಳನ್ನು ಸ್ವೀಕರಿಸಲು ಅಲ್ಲದೆ ಯಾವುದೇ ಮಾಹಿತಿ ಒದಗಿಸಲು ಉಚಿತ ಸಹಾಯವಾಣಿ 1950ನ್ನ ಪ್ರಾರಂಭಿಸಲಾಗಿದೆ.
ಸಹಾಯವಾಣಿ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಎಲ್ಲ ಸರ್ಕಾರಿ ವಾಹನಗಳಿಗೂ 1950 ಸಹಾಯವಾಣಿ ಸಂಖ್ಯೆಯ ಪೋಸ್ಟರ್ ಸ್ಟಿಕ್ಕರ್ ಅಳವಡಿಸಲು ನಿರ್ಧರಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಜಿಲ್ಲೆಯಲ್ಲಿ ಎಲ್ಲ ಸರ್ಕಾರಿ ವಾಹನಗಳಿಗೆ ಈ ಸ್ಟಿಕ್ಕರ್ ಅಳವಡಿಸಲಾಗುವುದು. ಈ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದರು 1950 ಉಚಿತ ಸಹಾಯವಾಣಿ ಮೂಲಕ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.