ಚಿತ್ರದುರ್ಗ:ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಎ .ನಾರಾಯಣಸ್ವಾಮಿ ಟೆಂಪಲ್ ರನ್ ಆರಂಭಿಸಿದ್ದಾರೆ.
ಇಂದು ಜಿಲ್ಲೆಯ ಹೊಳಲ್ಕೆರೆ ನಗರದಲ್ಲಿರುವ ಐತಿಹಾಸಿಕ ಗಣಪತಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಚಾರವನ್ನು ಆರಂಭಿಸಿದರು. ಇವರು ಎಲ್ಲಿ ಪ್ರಚಾರಕ್ಕೆ ತೆರಳುತ್ತಾರೋ ಅಲ್ಲಿ ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ ದೇವರುಗಳ ಆಶೀರ್ವಾದ ಪಡೆದು ಪ್ರಚಾರ ಆರಂಭಿಸುವುದನ್ನು ಕರಗತವಾಗಿ ಮಾಡಿಕೊಂಡಿದ್ದಾರೆ. ಕೇವಲ ದೇವಾಲಯ ಮಾತ್ರವಲ್ಲದೆ ದರ್ಗಾ,ಮಸೀದಿಗಳಿಗೂ ಭೇಟಿ ನೀಡುತ್ತಿದ್ದಾರೆ.
ಇದೇ ವೇಳೆ ಹೊಳಲ್ಕೆರೆ ನಗರದದಾಂತ್ಯ ರೋಡ್ ಶೋ ಮಾಡುವ ಮೂಲಕ ಸಂಸದ ಚಂದ್ರಪ್ಪ ಮತಯಾಚಿಸಿದರು.
ಮುಸ್ಲಿಂ ಮುಖಂಡರನ್ನು ಭೇಟಿ ಮಾಡಿದ ಮೈತ್ರಿ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ
ಮೈತ್ರಿ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಲೋಕ ಸಮರಕ್ಕೆ ಕೈ ಕಮಲ ಕಲಿಗಳ ನಡುವೆ ಸೆಣಸಾಟ ಏರ್ಪಟ್ಟಿದೆ. ಈಗಾಗಲೇ ಪ್ರಚಾರ ಅಖಾಡಕ್ಕಿಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್ .ಚಂದ್ರಪ್ಪ ಮುಸ್ಲಿಂ ಮುಖಂಡರನ್ನು ಭೇಟಿ ಮಾಡುವ ಮೂಲಕ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಒಂದುವರೆ ಲಕ್ಷಕ್ಕೂ ಹೆಚ್ಚಿರುವ ಮುಸ್ಲಿಂ ಮತಗಳನ್ನು ತನ್ನೆಡೆ ಸೆಳೆಯಲು ಚಂದ್ರಪ್ಪ ನಗರದ ಫಾತೀಮಾ ಮಸೀದಿಗೆ ತೆರಳಿ ಮುಖಂಡರನ್ನು ಭೇಟಿಯಾಗಿ ಕಾಂಗ್ರೆಸ್ ಕೈ ಹಿಡಿಯುವಂತೆ ಮನವಿ ಮಾಡಿಕೊಂಡರು. ಇದೇ ವೇಳೆ ಅಲ್ಲಿ ನೆರೆದಿದ್ದ ಕೆಲ ಮುಸ್ಲಿಮರು ಚಂದ್ರಪ್ಪನವರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿ ಬಿದ್ದ ದೃಶ್ಯ ಕಂಡು ಬಂದವು.