ಚಿತ್ರದುರ್ಗ: ಕೊರೊನಾ ಸೋಂಕಿತರಿರದ ಹಿನ್ನೆಲೆ ಜಿಲ್ಲೆಯನ್ನು ಹಸಿರು ವಲಯವೆಂದು ಘೋಷಿಸಿದ್ದು, ಲಾಕ್ಡೌನ್ನಿಂದ ಸಡಿಲಿಕೆ ಮಾಡಲಾಗಿದೆ. ಈ ಹಿನ್ನೆಲೆ ವಾಣಿಜ್ಯ ಚಟುವಟಿಕೆ ಸೇರಿದಂತೆ ಕೆಎಸ್ಆರ್ಟಿಸಿ ಬಸ್ ತನ್ನ ಸಂಚಾರ ಆರಂಭಿಸಿದೆ.
ಚಿತ್ರದುರ್ಗದಲ್ಲಿ ಸಾರಿಗೆ ಬಸ್ ಸಂಚಾರ ಆರಂಭ - Chitradurga News
ಚಿತ್ರದುರ್ಗದಲ್ಲಿ ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಹೊಸದುರ್ಗ, ಹೊಳಲ್ಕೆರೆ ಸೇರಿದ್ದಂತೆ ಶಿವಮೊಗ್ಗ, ದಾವಣಗೆರೆಗೆ ಸಂಚರಿಸಿಲು ವ್ಯವಸ್ಥೆ ಮಾಡಲಾಗಿದೆ. ಸತತ 40 ದಿನಗಳಿಂದ ಬಸ್ ಗಳಿಲ್ಲದೆ ಹೈರಾಣಾಗಿದ್ದಾ ಜನಸಾಮಾನ್ಯರು ಸ್ಕ್ರೀನಿಂಗ್ ಮಾಡಿಸಿಕೊಳ್ಳುವ ಮೂಲಕ ಪ್ರಯಾಣಕ್ಕೆ ಮುಂದಾಗಿದ್ದಾರೆ.
![ಚಿತ್ರದುರ್ಗದಲ್ಲಿ ಸಾರಿಗೆ ಬಸ್ ಸಂಚಾರ ಆರಂಭ Lockdown relaxation: bus Transportation starts in Chitradurga](https://etvbharatimages.akamaized.net/etvbharat/prod-images/768-512-7053880-334-7053880-1588580027991.jpg)
ಚಿತ್ರದುರ್ಗದಲ್ಲಿ ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಹೊಸದುರ್ಗ, ಹೊಳಲ್ಕೆರೆ ಸೇರಿದ್ದಂತೆ ಶಿವಮೊಗ್ಗ, ದಾವಣಗೆರೆಗೆ ಸಂಚರಿಸಿಲು ವ್ಯವಸ್ಥೆ ಮಾಡಲಾಗಿದೆ. ಸತತ 40 ದಿನಗಳಿಂದ ಬಸ್ ಗಳಿಲ್ಲದೆ ಹೈರಾಣಾಗಿದ್ದ ಜನಸಾಮಾನ್ಯರು ಸ್ಕ್ರೀನಿಂಗ್ ಮಾಡಿಸಿಕೊಳ್ಳುವ ಮೂಲಕ ಪ್ರಯಾಣಕ್ಕೆ ಮುಂದಾಗಿದ್ದಾರೆ.
ಸಾರಿಗೆ ಬಸ್ ನಿಲ್ದಾಣದಲ್ಲಿ ಈಗಾಗಲೇ 30 ಬಸ್ ಗಳ ಸಂಚಾರ ಆರಂಭಿಸಲಾಗಿದ್ದು, ಪ್ರತಿಯೊಬ್ಬ ಪ್ರಯಾಣಿಕರಿಗೆ ತರ್ಮಲ್ ಸ್ಕ್ರೀನಿಂಗ್ ಮಾಡಿ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ. ಬಸ್ ಗಳಲ್ಲಿ ಶೇ. 50 ರಷ್ಟು ಸೀಟ್ಗಳಲ್ಲಿ ಮಾತ್ರ ಜನರಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಅದ್ರೇ ಖಾಸಗಿ ಬಸ್ ಸಂಚಾರ ವ್ಯವಸ್ಥೆ ಮಾತ್ರ ಇನ್ನೂ ಆರಂಭವಾಗದೆ ಇರುವುದು ಗ್ರಾಮೀಣ ಭಾಗದ ಜನರಲ್ಲಿ ಬೇಸರ ತರಿಸಿದೆ.