ಚಿತ್ರದುರ್ಗ: ದೇಶದಾದ್ಯಂತ ಕೊರೊನಾ ವೈರಸ್ ಹರಡದಂತೆ ನಿಗಾ ವಹಿಸಲು ಸಂಪುರ್ಣ ಲಾಕ್ಡೌನ್ ಆದೇಶ ಜಾರಿ ಮಾಡಲಾಗಿದೆ. ಈ ಹಿನ್ನೆಲೆ ಬಡ ಕೂಲಿ ಕಾರ್ಮಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇನ್ನು ಈ ರೀತಿ ಕೂಲಿ ಕಾರ್ಮಿಕರಿಗೆ ಚಿತ್ರದುರ್ಗದ ಮುರುಘಾ ಮಠ ನೆರವಿಗೆ ಬಂದಿದೆ.
ಲಾಕ್ಡೌನ್ ಎಫೆಕ್ಟ್: ಬಡ ಕೂಲಿ ಕಾರ್ಮಿಕರ ನೆರವಿಗೆ ಧಾವಿಸಿದ ಮುರುಘಾ ಮಠ - ವೀರಶೈವ ಸಮಾಜ
ಲಾಕ್ಡೌನ್ ಹಿನ್ನೆಲೆ ಸಂಕಷ್ಟಕ್ಕೀಡಾದ ಕಾರ್ಮಿಕರಿಗೆ ಶ್ರೀ ಶಿವಮೂರ್ತಿ ಮುರುಘಾ ಶರಣರು ಮುರುಘಾ ಮಠದ ಆವರಣದಲ್ಲಿ ಆಹಾರ ಧಾನ್ಯಗಳನ್ನು ವಿತರಣೆ ಮಾಡಿದರು.
ಲಾಕ್ಡೌನ್ ಎಫೆಕ್ಟ್: ಬಡ ಕೂಲಿ ಕಾರ್ಮಿಕರ ನೆರವಿಗೆ ಧಾವಿಸಿದ ಮುರುಘಾ ಮಠ
ಲಾಕ್ಡೌನ್ ಹಿನ್ನೆಲೆ ಸಂಕಷ್ಟಕ್ಕೀಡಾದ ಕಾರ್ಮಿಕರಿಗೆ ಶ್ರೀ ಶಿವಮೂರ್ತಿ ಮುರುಘಾ ಶರಣರು ಮುರುಘಾ ಮಠದ ಆವರಣದಲ್ಲಿ ಆಹಾರ ಧಾನ್ಯಗಳನ್ನು ವಿತರಣೆ ಮಾಡಿದರು. ವೀರಶೈವ ಸಮಾಜದ ಅಧ್ಯಕ್ಷ ಜಯಣ್ಣ ಹಾಗೂ ಮುರುಘಾ ಮಠದ ಪೀಠಾಧಿಪತಿ ಶ್ರೀ ಡಾ. ಶಿವಮೂರ್ತಿ ಮುರುಘಾ ಶರಣರು ಜಂಟಿಯಾಗಿ ರಾಗಿ, ಬೇಳೆ, ಗೋಧಿ, ಅಕ್ಕಿ ಇರುವ ಕಿಟ್ ವಿತರಿಸಿದರು. ಈಗಾಗಲೇ ಹಕ್ಕಿಪಿಕ್ಕಿ ಜನಾಂಗದ ಜನರಿಗೆ ಎರಡು ಹೊತ್ತು ಆಹಾರ ಕಲ್ಪಿಸಲು ಮುಂದಾಗಿದ್ದ ಮುರುಘಾ ಮಠ, ಇದೀಗ ಆಹಾರ ಧಾನ್ಯಗಳಿರುವ ಕಿಟ್ ವಿತರಣೆ ಮಾಡಿ ಬಡ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಿದೆ.