ಕರ್ನಾಟಕ

karnataka

ETV Bharat / state

ಪ್ರೀತಿಸಿ ಮದುವೆಯಾದ ಪ್ರೇಮಿಗಳು.. ಜಾತಿ ಕಾರಣಕ್ಕೆ ಲವ್​ ಬರ್ಡ್ಸ್​ಗೆ ಪೋಷಕರಿಂದ ಜೀವ ಬೆದರಿಕೆ - ಪ್ರೀತಿಸಿ ಮದುವೆಯಾದ ಜೋಡಿ

ಕೋಟೆನಾಡು ಚಿತ್ರದುರ್ಗದಲ್ಲಿ ಪ್ರೀತಿಸಿ ಮದುವೆಯಾದ ಜೋಡಿಗೆ ಪೋಷಕರಿಂದ ಜೀವ ಬೆದರಿಕೆ ಎದುರಾಗಿದೆ. ಇದೀಗ ಈ ಪ್ರೇಮಿಗಳು ರಕ್ಷಣೆ ಕೋರಿ ಪೊಲೀಸ್​ ವರಿಷ್ಠಾಧಿಕಾರಿಯವರ ಕಚೇರಿ ಮೆಟ್ಟಿಲೇರಿದ್ದಾರೆ.

ಪ್ರೇಮಿಗಳು
ಪ್ರೇಮಿಗಳು

By

Published : Aug 7, 2022, 4:00 PM IST

ಚಿತ್ರದುರ್ಗ: ಜಾತಿ ಹಾಗೂ ಧರ್ಮ ಭೇದವನ್ನು ನಿರ್ಮೂಲನೆಗೊಳಿಸಲು ಸರ್ಕಾರ ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುತ್ತಿದೆ. ಆದರೆ, ಕೋಟೆನಾಡು ಚಿತ್ರದುರ್ಗದ ಯುವಕನೋರ್ವ ಪಾವಗಡದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದು, ಈಗ ಈ ಜೋಡಿಗೆ ಜೀವ ಬೆದರಿಕೆ ಇದೆಯಂತೆ. ಈ ನವದಂಪತಿಗೆ ನೆಮ್ಮದಿಯಾಗಿ ಬದುಕಲು ಬಿಡದ ಯುವತಿಯ ಪೋಷಕರು‌ ಇಬ್ಬರಿಗೂ ಪ್ರಾಣ ಬೆದರಿಕೆ ಹಾಕಿದ್ದಾರಂತೆ. ಈ ಕುರಿತ ಒಂದು ವರದಿ ಇಲ್ಲಿದೆ.

ರಕ್ಷಣೆ ಕೋರಿ ಎಸ್​ಪಿ ಕಚೇರಿ ಬಳಿ ಧಾವಿಸಿರುವ ನವಜೋಡಿ, ಸಾಯ್ತಿವಿ ಹೊರತು ಇಬ್ಬರು ಪರಸ್ಪರ ಬಿಟ್ಟಿರೋಕೆ ಆಗಲ್ಲ‌ ಎನ್ನುತ್ತಿದ್ದಾರೆ. ಹೌದು, ಕಳೆದ ಎರಡು ವರ್ಷಗಳ ಹಿಂದೆ ಚಿತ್ರದುರ್ಗ ತಾಲೂಕಿನ ಸಜ್ಜನಕೆರೆ‌ ಗ್ರಾಮದ‌ ಪ್ರಕಾಶ್​ ಎಂಬ ಈ ಯುವಕ ಖಾಸಗಿ ಬಸ್ ಚಾಲಕನಾಗಿ ಪಾವಗಡಕ್ಕೆ ತೆರಳುತ್ತಿದ್ದರು.

ಪೋಷಕರಿಂದ ಪ್ರಾಣ ಬೆದರಿಕೆ ಬಂದಿರುವ ಬಗ್ಗೆ ಪ್ರೇಮಿಗಳು ಮಾತನಾಡಿದ್ದಾರೆ

ಕಿಡ್ನಾಪ್ ಮಾಡುವುದಾಗಿ ಬೆದರಿಕೆ: ಆಗ ಕಾಲೇಜಿಗೆ ಬರುತ್ತಿದ್ದ ಪಾವಗಡದ ಸಂಧ್ಯಾ ಎಂಬ ವಿದ್ಯಾರ್ಥಿನಿ ಈ ಯುವಕನನ್ನು ನೋಡಿ, ಮೆಚ್ಚಿಕೊಂಡು ಇಬ್ಬರು ಒಬ್ಬರಿಗೊಬ್ಬರು ಪರಸ್ಪರ ಪ್ರೀತಿಸಿದ್ರು. ಅಂದಿನಿಂದ ಮೊಬೈಲ್‌ನಲ್ಲೇ ಲವ್ವಿ-ಡವ್ವಿ ನಡೆಸುತ್ತಿದ್ದ ಪ್ರೇಮಿಗಳು ಕೊನೆಗೆ ಕಳೆದ ಶುಕ್ರವಾರವಷ್ಟೇ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದಾರೆ. ಹೀಗಾಗಿ, ಈ ವಿಚಾರ ತಿಳಿದ ಸಂಧ್ಯಾಳ ಪೋಷಕರು ಪಾವಗಡದಿಂದ ಚಿತ್ರದುರ್ಗಕ್ಕೆ‌ ಧಾವಿಸಿ, ಈ ನವ ದಂಪತಿಗೆ ಕೊಲೆ ಬೆದರಿಕೆ ಹಾಕಿದ್ದಾರಂತೆ. ಅಲ್ಲದೇ ಅನ್ಯ ಜಾತಿಯ ಹುಡುಗನಿಗೆ ನಮ್ಮ ಹುಡುಗಿಯನ್ನು ಕೊಡಲ್ಲ. ಕೂಡಲೇ ನಮ್ಮ ಹುಡುಗಿಯನ್ನು ಕಳುಹಿಸಿ, ಇಲ್ಲವಾದ್ರೆ ಪ್ರಕಾಶನ ತಂದೆಯನ್ನು ಕಿಡ್ನಾಪ್ ಮಾಡುವುದಾಗಿ ಬೆದರಿಸಿದ್ದಾರಂತೆ.

ಹೀಗಾಗಿ, ಬೆಚ್ಚಿಬಿದ್ದಿರೋ ಪ್ರಕಾಶ್​ ಹಾಗೂ ಸಂಧ್ಯಾ ತಮಗೆ ಸೂಕ್ತ ರಕ್ಷಣೆ ಒದಗಿಸುವಂತೆ‌ ಚಿತ್ರದುರ್ಗ ಎಸ್ಪಿ ಮೊರೆ ಹೋಗಿದ್ದಾರೆ. ತನ್ನ ಪ್ರೀತಿ ಉಳಿಸಿಕೊಳ್ಳಲು ಹೆತ್ತವರನ್ನು ಬಿಟ್ಟು ಬಂದು ತನ್ನ ಕೊರಳಿಗೆ ಪ್ರೇಮಿಯಿಂದ ತಾಳಿ ಕಟ್ಟಿಸಿಕೊಂಡಿರುವ ಸಂಧ್ಯಾ, ಇದ್ದರೆ ಪ್ರಕಾಶನ ಜೊತೆ ಇರ್ತಿನಿ. ಇಲ್ಲವಾದಲ್ಲಿ ಪ್ರಾಣ ಬಿಡ್ತೀನಿ ಹೊರತು ಪೋಷಕರೊಂದಿಗೆ ಹೋಗಲ್ಲ ಎನ್ನುತ್ತಿದ್ದಾರೆ.

ಜೀವ ರಕ್ಷಣೆಗಾಗಿ ಪೊಲೀಸರ ಮೊರೆ:ಸೊಸೆಯಂತೆ ಆಸೆಯಿಂದ ಒಪ್ಪಿಕೊಂಡಿರುವ ಪ್ರಕಾಶನ ತಾಯಿ, ಪ್ರೀತಿಸಿ ಮದುವೆಯಾದ ಜೋಡಿಯನ್ನು‌ ದೂರ ಮಾಡಬೇಡಿ ಅಂತ‌ ಅಂಗಲಾಚಿದ್ದಾರೆ. ಒಟ್ಟಾರೆ ಪ್ರೀತಿಸಿದ ಪ್ರೇಮಿಗಳು ಧೈರ್ಯ ಮಾಡಿ ಮದುವೆಯಾಗುವ ಮೂಲಕ ತಮ್ಮ ಪ್ರೀತಿಯನ್ನು ಉಳಿಸಿಕೊಂಡಿದ್ದಾರೆ. ಈ ನವ ದಂಪತಿಯ ಜೀವ ರಕ್ಷಣೆಗಾಗಿ ಚಿತ್ರದುರ್ಗ ಪೊಲೀಸರು ಏನು ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಓದಿ:ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಟ: ಜಿಲ್ಲಾಸ್ಪತ್ರೆಯನ್ನೇ ಮೇಲ್ದರ್ಜೆಗೇರಿಸಲು ಮುಂದಾದ ಸರ್ಕಾರ

ABOUT THE AUTHOR

...view details