ಚಿತ್ರದುರ್ಗ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ ಎರಡು ವರ್ಷದ ನಂತರ ಚಿತ್ರದುರ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1.75 ಲಕ್ಷ ರೂ. ದಂಡ ವಿಧಿಸಿತು. ಚಿತ್ರದುರ್ಗ ನಗರದ ಬಡಮಕಾನ್ ನಿವಾಸಿ ಶೋಯಬ್ (22) ಈ ಪ್ರಕರಣದ ಅಪರಾಧಿ.
ಪ್ರಕರಣದ ವಿವರ:

ಬಡಮಕಾನ್ನ ಮನೆಯೊಂದರ ಬಾಲಕಿ ಅನಾರೋಗ್ಯದಿಂದ ಮನೆಯಲ್ಲೇ ಇದ್ದಳು. ಯಾರೂ ಇಲ್ಲದ ಆ ಸಮಯದಲ್ಲಿ ಈತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಪೋಷಕರು ಸಂಜೆ ಮನೆಗೆ ಬಂದಾಗ ಬಾಲಕಿ ಸುಸ್ತಾಗಿ ಮಲಗಿದ್ದಳು. ಎರಡನೇ ದಿನವೂ ಆರೋಗ್ಯದಲ್ಲಿ ಚೇತರಿಕೆ ಕಾಣದಿದ್ದರಿಂದ ತಾಯಿ ಮಗಳನ್ನು ವಿಚಾರಿಸಿದ್ದು, ನಡೆದ ಘಟನೆ ತಿಳಿಸಿದ್ದಳು.
ಇದನ್ನೂ ಓದಿ:ಅನೈತಿಕ ಸಂಬಂಧ ಆರೋಪ: ಸುತ್ತಿಗೆಯಿಂದ ತೊಡೆ ಭಾಗಕ್ಕೆ ಹೊಡೆದು ಪ್ರೇಯಸಿ ಕೊಂದ ಪ್ರಿಯಕರ!
2019ರ ಜನವರಿ10 ರಂದು ಈ ಘಟನೆ ನಡೆದಿತ್ತು. ಈ ಬಗ್ಗೆ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಶೇಷ ಸರ್ಕಾರಿ ಅಭಿಯೋಜಕ ಜಯರಾಮ್ ಅಪ್ರಾಪ್ತೆ ಪರ ವಾದ ಮಂಡಿಸಿದ್ದಾರೆ. ನ್ಯಾಯಾಧೀಶ ಶಂಕ್ರಪ್ಪ ನಿಂಬಣ್ಣ ಕಲಕಣಿ ಆದೇಶ ಪ್ರಕಟಿಸಿದ್ದಾರೆ.