ಚಿತ್ರದುರ್ಗ: ಕೊರೊನಾ ವೈರಸ್ ದೇಶ ಬಿಟ್ಟು ತೊಲಗಲಿ ಎಂದು ಮುರುಘಾ ಶ್ರೀಗಳು ಇಷ್ಟಲಿಂಗ ಪೂಜೆ ಮಾಡಿದ್ದಾರೆ. ಕೊರೊನಾ ಸೋಂಕಿನಿಂದ ಜನರು ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. ಅದ್ದರಿಂದ ಕೊರೊನಾ ವೈರಾಣು ತೊಲಗಲಿ ಅಂತ ಮುರುಘಾ ಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಇಷ್ಟಲಿಂಗ ಪೂಜೆ ನೆರವೇರಿಸಿದರು.
ಕೊರೊನಾ ದೇಶ ಬಿಟ್ಟು ತೊಲಗಲಿ ಎಂದು ಪ್ರಾರ್ಥಿಸಿ ಮುರುಘಾ ಶ್ರೀಗಳಿಂದ ಇಷ್ಟಲಿಂಗ ಪೂಜೆ - athanishivabasav swamy
ಇಷ್ಟಲಿಂಗ ಪೂಜೆಗೆ ಅಖಿಲ ಭಾರತ ವೀರಶೈವ ಮಹಾಸಭಾ, ಬಸವ ಸಮಿತಿ ಕರೆ ನೀಡಿದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಶಿವಮೂರ್ತಿ ಮುರುಘಾ ಶರಣರು ಇಷ್ಟಲಿಂಗ ಪೂಜೆ ನೆರವೇರಿಸಿ ಕೊರೊನಾ ವೈರಸ್ ತೊಲಗಲಿ ಎಂದು ಪ್ರಾರ್ಥನೆ ಮಾಡಿದರು.
ಕೊರೊನಾ ದೇಶಬಿಟ್ಟು ತೊಲಗಲಿ: ಚಿತ್ರದುರ್ಗದಲ್ಲಿ ಮುರುಘಾ ಶ್ರೀ ಇಷ್ಟಲಿಂಗಾ ಪೂಜೆ
ಇಷ್ಟಲಿಂಗ ಪೂಜೆಗೆ ಅಖಿಲ ಭಾರತ ವೀರಶೈವ ಮಹಾಸಭಾ, ಬಸವ ಸಮಿತಿ ಕರೆ ನೀಡಿದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಶಿವಮೂರ್ತಿ ಮುರುಘಾ ಶರಣರು ಇಷ್ಟಲಿಂಗ ಪೂಜೆ ನೆರವೇರಿಸಿ ಕೊರೊನಾ ವೈರಸ್ ತೊಲಗಲಿ ಎಂದು ಪ್ರಾರ್ಥನೆ ಮಾಡಿದರು.
ಮುರುಘಾ ಮಠದಲ್ಲಿ ಈ ಇಷ್ಟಲಿಂಗ ಪೂಜೆ ನೆರವೇರಿಸಲಾಗಿದ್ದು, ಅಥಣಿ ಮಠದ ಶಿವಬಸವ ಸ್ವಾಮೀಜಿ, ಮಾಚಿದೇವ ಮಠದ ಬಸವ ಮಾಚಿದೇವ ಶ್ರೀಗಳು ಸಾಥ್ ನೀಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡು ಇಷ್ಟಲಿಂಗ ಪೂಜೆ ನೆರವೇರಿಸಿ ಕೊರೊನಾ ವೈರಾಣು ವಿಶ್ವದಿಂದ ತೊಲಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.