ಚಿತ್ರದುರ್ಗ:ಕುಷ್ಠರೋಗದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂಕುಷ್ಠರೋಗ ಪತ್ತೆಗೆಅರಿವು ಆಂದೋಲನ ಆಯೋಜಿಸಲಾಗಿದ್ದು, ಸಂಬಂಧಪಟ್ಟ ಇಲಾಖೆಗಳು ತಮ್ಮ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಸೂಚನೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಜ.30 ರಿಂದ ಫೆ.13 ರವರೆಗೆ ಕುಷ್ಠರೋಗ ಜಾಗೃತಿ ಆಂದೋಲನ - ಚಿತ್ರದುರ್ಗದಲ್ಲಿ ಕುಷ್ಠರೋಗ ಜಾಗೃತಿ ಆಂದೋಲನ
ಚಿತ್ರದುರ್ಗದಲ್ಲಿ ಕುಷ್ಠರೋಗದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜ. 30 ರಿಂದ ಫೆ. 13 ರವರೆಗೆ ಜಿಲ್ಲೆಯಲ್ಲಿ ಅರಿವು ಆಂದೋಲನ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಕುಷ್ಠರೋಗ ಪತ್ತೆಗಾಗಿ ಕೈಗೊಂಡ ವಿಶೇಷ ಸಮೀಕ್ಷೆ ಕಾರ್ಯಕ್ರಮದಲ್ಲಿ ಹೊಸದಾಗಿ ಒಟ್ಟು 32 ಕುಷ್ಠರೋಗ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.
ಈ ಪೈಕಿ 10 ಪ್ರಕರಣಗಳು ಪ್ರಾರಂಭಿಕ ಹಂತದ್ದಾಗಿದ್ದು, ಉಳಿದಂತೆ 22 ಪ್ರಕರಣಗಳು ನಂತರದ ಹಂತದ್ದಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ ಹಳೆಯ 45 ಕುಷ್ಠರೋಗ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 77 ಕುಷ್ಠರೋಗ ಪ್ರಕರಣಗಳು ದಾಖಲಾದಂತಾಗಿದೆ. ಪ್ರಾರಂಭಿಕ ಹಂತದಲ್ಲಿಯೇ ಕುಷ್ಠರೋಗವನ್ನು ಪತ್ತೆ ಮಾಡಿದಲ್ಲಿ ಬಹುಬೇಗ ಗುಣಪಡಿಸಬಹುದಾಗಿದೆ ಎಂದು ತಿಳಿಸಿದರು.