ಚಿತ್ರದುರ್ಗ:ಚಿರತೆ ದಾಳಿಯಿಂದ 15 ಕ್ಕೂ ಹೆಚ್ಚು ಕುರಿಮರಿಗಳು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕಸ್ತೂರಂಗಪ್ಪನಹಳ್ಳಿಯಲ್ಲಿ ನಡೆದಿದೆ.
ಕಸ್ತೂರಂಗಪ್ಪನಹಳ್ಳಿ ಗ್ರಾಮದ ಕುರಿಗಾಹಿ ರಾಜಪ್ಪ ಅವರಿಗೆ ಸೇರಿದ 15 ಕುರಿಮರಿಗಳನ್ನು ಕುರಿ ಅಟ್ಟಿಗೆ ನುಗ್ಗಿ ಚಿರತೆ ಸಾಯಿಸಿದೆ. ಕುರಿಗಳ ಸಾವಿನಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕುರಿಗಳನ್ನು ಸಾಕಿ ಬದುಕು ಕಟ್ಟಿಕೊಂಡಿದ್ದ ರಾಜಪ್ಪ ಈ ದುರ್ಘಟನೆಯಿಂದ ಕುಗ್ಗಿ ಹೋಗಿದ್ದಾರೆ. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.