ಕರ್ನಾಟಕ

karnataka

ETV Bharat / state

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ವಾಹನ ಡಿಕ್ಕಿಯಾಗಿ ಚಿರತೆ ಸಾವು - forest officers took leopard to post martem

ಸುಮಾರು 8 ತಿಂಗಳ ಚಿರತೆ ಎಂದು ಅಂದಾಜಿಸಲಾಗಿದ್ದು, ಇಂದು ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ..

leopard-died-in-vehilce-hit-at-chitradurga
ವಾಹನ ಡಿಕ್ಕಿಯಾಗಿ ಚಿರತೆ ಸಾವು

By

Published : Feb 26, 2022, 2:28 PM IST

ಚಿತ್ರದುರ್ಗ : ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಚಿರತೆಯೊಂದು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ ತಮಟಕಲ್ಲು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ‌ ನಡೆದಿದೆ.

ತಡರಾತ್ರಿ ಈ ಘಟನೆ ನಡೆದಿದ್ದು, ಚಿರತೆ ರಸ್ತೆ ದಾಟುವಾಗ ಯಾವುದa ಅಪರಿಚಿತ ವಾಹನ ಡಿಕ್ಕಿ ಹೊಡೆದ‌ ಪರಿಣಾಮ ಗಂಭೀರವಾಗಿ ಗಾಯಗೊಂಡು, ಸ್ಥಳದಲ್ಲಿಯೇ ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಮೃತ ಚಿರತೆಯನ್ನು ನಗರದ ಆಡುಮಲ್ಲೇಶ್ವರ ಮೃಗಾಲಯಕ್ಕೆ ರವಾನಿಸಲಾಗಿದೆ.

ಸುಮಾರು 8 ತಿಂಗಳ ಚಿರತೆ ಎಂದು ಅಂದಾಜಿಸಲಾಗಿದ್ದು, ಇಂದು ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿನ ಜೋಗಿಮಟ್ಟಿ ಗಿರಿಧಾಮ ಮತ್ತು ಹೆದ್ದಾರಿಯ ಪಕ್ಕದಲ್ಲಿ ಗುಡ್ಡಗಳು ಇರುವುದರಿಂದ ಇಲ್ಲಿ ಚಿರತೆಗಳು, ಕರಡಿಗಳು ಹೆಚ್ಚಾಗಿವೆ. ರಾತ್ರಿ ಸಮಯದಲ್ಲಿ ವಾಹನ ಚಾಲಕರು ಜಾಗರೂಕತೆಯಿಂದ ವಾಹನಗಳ ಚಾಲನೆ ಮಾಡುವುದರಿಂದ ಕಾಡು ಪ್ರಾಣಿಗಳು ರಸ್ತೆಯಲ್ಲಿ ಸಾಯುವುದನ್ನು ತಡೆಯಬಹುದು.

ಓದಿ :ಉಕ್ರೇನ್​​ನಲ್ಲಿ ಸಿಲುಕಿದ ತುಮಕೂರಿನ ಅಕ್ಕ ತಮ್ಮ.. ಆತಂಕದಲ್ಲಿರುವ ಪೋಷಕರಿಗೆ ಧೈರ್ಯ ತುಂಬಿದ ಶಾಸಕ

ABOUT THE AUTHOR

...view details