ಕರ್ನಾಟಕ

karnataka

ETV Bharat / state

9ರಲ್ಲಿ 8 ಬೇಡಿಕೆ ಈಡೇರಿಸಿದರೂ ಯಾರ ಮೇಲಿನ ದ್ವೇಷಕ್ಕಾಗಿ ಮತ್ತೆ ಮುಷ್ಕರ: ಲಕ್ಷ್ಮಣ​ ಸವದಿ - ಸಾರಿಗೆ ನೌಕರರ ಮುಷ್ಕರ

ನನ್ನ ಮೇಲೆ ವೈಯಕ್ತಿಕ ದ್ವೇಷವೇ, ನಿಗಮದ ಮೇಲೆ ದ್ವೇಷವೇ ಅಥವಾ ರಾಜ್ಯ ಸರ್ಕಾರದ ಮೇಲಿನ ದ್ವೇಷಕ್ಕೆ ಪ್ರತಿಭಟನೆ ನಡೆಸುತ್ತೀರಾ?. ನೀವು ಮತ್ತೆ ಮುಷ್ಕರ ನಡೆಸುವ ಬಗ್ಗೆ ನೋಟಿಸ್ ನೀಡಿದ್ದು ನನಗೆ ಯಕ್ಷ ಪ್ರಶ್ನೆಯಾಗಿದೆ ಎಂದು ಸಾರಿಗೆ ನೌಕರರ ಮುಷ್ಕರದ ಕುರಿತು ಡಿಸಿಎಂ ಲಕ್ಷ್ಮಣ್ ಸವದಿ ಅಸಮಾಧಾನ ವ್ಯಕ್ತಪಡಿಸಿದರು.

laxman-savadi-statement-on-ksrtc-employees-strike
ಡಿಸಿಎಂ ಲಕ್ಷ್ಮಣ್​ ಸವದಿ

By

Published : Mar 21, 2021, 8:05 PM IST

Updated : Mar 22, 2021, 7:08 AM IST

ಚಿತ್ರದುರ್ಗ:ನನ್ನ ಮೇಲೆ ವೈಯಕ್ತಿಕ ದ್ವೇಷವೇ ಅಥವಾ ನಿಗಮದ ಮೇಲೆ ದ್ವೇಷವೇ? ನೀವು ಮತ್ತೆ ಮುಷ್ಕರ ನಡೆಸುವ ನೋಟಿಸ್​ ನೀಡಿದ್ದು ನನಗೆ ಯಕ್ಷ ಪ್ರಶ್ನೆಯಾಗಿದೆ ಎಂದು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ​​​ ಸವದಿ ಅಸಮಾಧಾನ ವ್ಯಕ್ತಪಡಿಸಿದರು.

ಸಾರಿಗೆ ನೌಕರರ ಮುಷ್ಕರ ಕುರಿತು ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ

ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಬಸಾಪುರ ಗ್ರಾಮದಲ್ಲಿ ಚಾಲಕರ ತರಬೇತಿ ಕೇಂದ್ರ ಉದ್ಘಾಟಿಸಿದ ನಂತರ ಏಪ್ರಿಲ್ 7ರಿಂದ ಸಾರಿಗೆ ನೌಕರರಿಂದ ಮತ್ತೆ ಮುಷ್ಕರ ವಿಚಾರವಾಗಿ ಮಾತನಾಡಿದ ಅವರು, ಮತ್ತೆ ಸಾರಿಗೆ ನೌಕರರು ಹೋರಾಟಕ್ಕೆ ಮುಂದಾಗಿದ್ದು ಏಕೆ?. 9 ಬೇಡಿಕೆ ಈಡೇರಿಸಲು ಒಪ್ಪಿಕೊಂಡು 8 ಬೇಡಿಕೆ ಈಡೇರಿಸಿದ್ದೇವೆ. ಉಳಿದ ಒಂದು ಬೇಡಿಕೆ ಕೆಲವೇ ದಿನಗಳಲ್ಲಿ ಈಡೇರಿಸುತ್ತೇವೆ. ಆದರೂ ಈ ಹೋರಾಟ ಏತಕ್ಕಾಗಿ ಎಂದು ಪ್ರಶ್ನಿಸಿದರು.

ನನ್ನ ಮೇಲೆ ವೈಯಕ್ತಿಕ ದ್ವೇಷವೇ, ನಿಗಮದ ಮೇಲೆ ದ್ವೇಷವೇ ಅಥವಾ ರಾಜ್ಯ ಸರ್ಕಾರದ ಮೇಲಿನ ದ್ವೇಷಕ್ಕೆ ಪ್ರತಿಭಟನೆ ನಡೆಸುತ್ತೀರಾ?. ನೀವು ಮತ್ತೆ ಮುಷ್ಕರ ನಡೆಸುವ ಬಗ್ಗೆ ನೋಟಿಸ್ ನೀಡಿದ್ದು ನನಗೆ ಯಕ್ಷ ಪ್ರಶ್ನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾರಿಗೆ ಇಲಾಖೆ ಸಿಬ್ಬಂದಿಯನ್ನು ನಿರ್ಗತಿಕರಾಗಲು ನಾವು ಬಿಡಲ್ಲ. ಯಾರೋ ನೀಡಿದ ತಪ್ಪು ಕಲ್ಪನೆಯಿಂದ ಮುಷ್ಕರ ಬೇಡ. ಮುಷ್ಕರದ ದುಷ್ಪರಿಣಾಮ ಸಾರಿಗೆ ಇಲಾಖೆ ಮೇಲಾಗುತ್ತದೆ. ನಾವೆಲ್ಲಾ ಒಂದೇ ಕುಟುಂಬ, ಕುಟುಂಬದಲ್ಲಿಯೇ ಸಮಸ್ಯೆಗಳ ಕುರಿತು ಚರ್ಚಿಸಿ, ಶಾಶ್ವತ ಪರಿಹಾರ ಕಂಡುಕೊಳ್ಳೋಣ. ಮತ್ತೆ ಮುಷ್ಕರ ಮಾಡಿ ಸಾರ್ವಜನಿಕ ಟೀಕೆಗೆ ಗುರಿಯಾಗುವುದು ಬೇಡ ಎಂದು ನೌಕರರಲ್ಲಿ ಮನವಿ ಮಾಡಿಕೊಂಡರು.

Last Updated : Mar 22, 2021, 7:08 AM IST

ABOUT THE AUTHOR

...view details