ಚಿತ್ರದುರ್ಗ :ಪ್ರತಿಭಟನೆ ನಡೆಸಲು ಓಬವ್ವ ವೃತ್ತಕ್ಕೆ ಬಂದಿದ್ದ ಸಾರಿಗೆ ನೌಕರರನ್ನ ಪೊಲೀಸರು ತಡೆದ ಘಟನೆ ಚಿತ್ರದುರ್ಗ ನಗರದಲ್ಲಿ ನಡೆದಿದೆ.
ಕೆಎಸ್‌ಆರ್‌ಟಿಸಿ ನೌಕರರಿಗೆ ಸರ್ಕಾರಿ ನೌಕರಿ ಹಾಗೂ ಸೌಲಭ್ಯ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲು 150ಕ್ಕೂ ಅಧಿಕ ನೌಕರರು ಜಿಲ್ಲಾಧಿಕಾರಿ ಕಚೇರಿಯತ್ತ ಬರುತ್ತಿದ್ದರು. ಜಿಲ್ಲಾಡಳಿತದ ಅನುಮತಿ ಪಡೆದುಕೊಂಡು ಪ್ರತಿಭಟನೆ ನಡೆಸುವಂತೆ ನೌಕರರಿಗೆ ಡಿವೈಎಸ್‌ಪಿ ಪಾಂಡುರಂಗ ಸೂಚಿಸಿದರು.
ಇದನ್ನು ಓದಿ:ವೀರಪ್ಪನ್ ಊರಲ್ಲಿ ನೆಟ್‌ವರ್ಕ್‌ಗಾಗಿ 12 ಕಿ.ಮೀ ಕ್ರಮಿಸುವ ವಿದ್ಯಾರ್ಥಿಗಳು, ಉದ್ಯೋಗಿಗಳು..
ಬಳಿಕ ಸಾರಿಗೆ ಸಿಬ್ಬಂದಿ ಶಾಂತಿಯುತವಾಗಿ ಹೋರಾಟ ಮಾಡುತ್ತೇವೆ ಎಂದು ಅನುಮತಿ ನೀಡುವಂತೆ ಮನವಿ ಮಾಡಿದರು. ಆದ್ರೆ, ಜಿಲ್ಲಾಡಳಿತದ ಅನುಮತಿ ಪಡೆದುಕೊಂಡು ಧರಣಿ ಮಾಡುವಂತೆ ಸೂಚಿಸಿ, ಪ್ರತಿಭಟನಾಕಾರರನ್ನು ಪೊಲೀಸರು ನಡು ರಸ್ತೆಯಲ್ಲೇ ತಡೆದಿದ್ದಾರೆ. ತದ ನಂತರ ಅನುಮತಿ ಪತ್ರ ಬರೆದು ಸಾರಿಗೆ ನೌಕಕರು ಸಹಿ ಮಾಡಿ ಪೊಲೀಸರಿಗೆ ನೀಡಿದ್ದಾರೆ.