ಕರ್ನಾಟಕ

karnataka

ETV Bharat / state

ಹೆಣದಲ್ಲೂ ಹಣ, ಔಷಧಿಯಲ್ಲೂ ಹಣ ಲೂಟಿ: ಬಿಜೆಪಿ ವಿರುದ್ಧ ಡಿಕೆಶಿ ಕಿಡಿ - ಕೆಪಿಸಿಸಿ ಅಧ್ಯಕ್ಷರ ಪ್ರತಿಭಟನೆ

ಇದು ಕಾಂಗ್ರೆಸ್ ಕಾರ್ಯಕ್ರಮ ಅಲ್ಲ. ಜನತಾದಳ, ಬಿಜೆಪಿ, ದಳದ ಎಲ್ಲ ಜನರ ನೊಂದ ಕಾರ್ಯಕ್ರಮವಾಗಿದೆ. ಇದೊಂದೇ ವರ್ಷದಲ್ಲಿ 18 ಬಾರಿ ಬೆಲೆ ಏರಿಕೆ ಕಂಡಿದೆ. ಪೆಟ್ರೋಲ್ ಬೆಲೆ 100 ರೂಪಾಯಿ ಮುಟ್ಟಿ ದೊಡ್ಡ ಸಾಧನೆ ಮಾಡಿದೆ ಎಂದು ಡಿಕೆಶಿ ವ್ಯಂಗ್ಯವಾಡಿದರು.

PROTEST
PROTEST

By

Published : Jun 12, 2021, 8:23 PM IST

ಚಿತ್ರದುರ್ಗ: ಮಹಾಮಾರಿ ಕೊರೊನಾ ಎರಡನೇ ಅಲೆ ರಾಜ್ಯದಲ್ಲಿ ಅಬ್ಬರಿಸಿದ್ದು, ಅನೇಕ ಸಾವು ನೋವುಂಟಾಗಿದೆ. ಹೆಣ ಸುಡಲು, ಆಸ್ಪತ್ರೆಯಲ್ಲಿ ಔಷಧ, ಬೆಡ್​ಗೆ ಹಾಗೂ ಲಸಿಕೆ ಪಡೆಯಲೂ ಸರದಿ ಸಾಲು ನಿಲ್ಲುವಂತಾಯ್ತು. ಹೀಗಿರುವಾಗ ಬಿಜೆಪಿ ಸರ್ಕಾರ ಇನ್ನೇನು ಜನರನ್ನು ಕಾಪಾಡಿದೆ. ಹೆಣದಲ್ಲೂ ಹಣ, ಔಷಧಿಯಲ್ಲೂ ಹಣ ಲೂಟಿ ಮಾಡಿದೆ ಎಂದು ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಹಿರಿಯೂರು ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿನ್ನೆ ರಾಜ್ಯ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಿದ್ದೇವೆ. ನಾಳೆ ಹೋಬಳಿ, ಜಿಲ್ಲಾ ಪಂಚಾಯಿತಿ ಕೇಂದ್ರಗಳಲ್ಲಿ, ನಾಡಿದ್ದು ಗ್ರಾಪಂ ಕೇಂದ್ರಗಳಲ್ಲಿ ಉಳಿದಂತೆ ಐದು ದಿನ ಐದು ಸಾವಿರ ಕಡೆ ಪೆಟ್ರೋಲ್ ಬಂಕ್​​ಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ

ಇದು ಕಾಂಗ್ರೆಸ್ ಕಾರ್ಯಕ್ರಮ ಅಲ್ಲ. ಜನತಾದಳ, ಬಿಜೆಪಿ, ದಳದ ಎಲ್ಲ ಜನರ ನೊಂದ ಕಾರ್ಯಕ್ರಮವಾಗಿದೆ. ಇದೊಂದೇ ವರ್ಷದಲ್ಲಿ 18 ಬಾರಿ ಬೆಲೆ ಏರಿಕೆ ಕಂಡಿದೆ. ಪೆಟ್ರೋಲ್ ಬೆಲೆ 100 ರೂಪಾಯಿ ಮುಟ್ಟಿ ದೊಡ್ಡ ಸಾಧನೆ ಮಾಡಿದೆ. ಮೋದಿ, ಸಿಎಂ ಬಿಎಸ್​​​ವೈ ಅವರೇ ಪೆಟ್ರೋಲ್ ಬೆಲೆ ಏರಿಸಿದ್ರಿ, ಆದರೆ ರೈತರಿಗೆ ಬೆಂಬಲ ಬೆಲೆ ಏರಿಸಿದ್ರಾ? ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದರು. ಜನ ಬಿಜೆಪಿ ಸರ್ಕಾರಕ್ಕೆ ಉಗಿಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇನ್ನು ಸಿಎಂ ಬದಲಾವಣೆ ವಿಷಯ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಅವರು ತೋರಿಸಿದ ಸಿನಿಮಾ ನೋಡುತ್ತೇವೆ ಎಂದರು. ಇನ್ನೂ ಪ್ರತಿಭಟನೆ ಮಾಡುವ ಭರಾಟೆಯಲ್ಲಿ ಸಾಮಾಜಿಕ ಅಂತರ ಮಾಯವಾಗಿದ್ದರೂ ಪೊಲೀಸರು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದರು.

ಪ್ರತಿಭಟನೆಯಲ್ಲಿ ಮಾಜಿ ಸಂಸದ ಚಂದ್ರಪ್ಪ, ಮಾಜಿ ಸಚಿವ ಹೆಚ್.ಆಂಜನೇಯ, ಡಿ. ಸುಧಾಕರ್, ಹಾಲಿ ಶಾಸಕ ಟಿ. ರಘುಮೂರ್ತಿ, ಜಿ.ಎಸ್. ಮಂಜುನಾಥ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ABOUT THE AUTHOR

...view details