ಚಿತ್ರದುರ್ಗ: ಬೇಸಿಗೆ ಕಾಲ ಬಂತು ಅಂದ್ರೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಗ್ರಾಮೀಣ ಪ್ರದೇಶದಿಂದ ಬಂದವರಿಗೆ ನೀರಿನ ಬವಣೆ ನೀಗಿಸುವ ಉದ್ದೇಶದಿಂದ ಜಿಲ್ಲೆಯ ಚಳ್ಳಕೆರೆ ನಗರದ ಕಿಚ್ಚ ಚಾರಿಟಬಲ್ ಟ್ರಸ್ಟ್ ಯುವಕರು ತಂಪು ನೀರು ಒದಗಿಸುವ ವ್ಯವಸ್ಥೆ ಮಾಡಿದ್ದಾರೆ.
ಸಾರ್ವಜನಿಕರ ನೀರಿನ ಬವಣೆ ನೀಗಿಸಲು ಮುಂದಾದ ಯುವಕರು - ಕಿಚ್ಚ ಚಾರಿಟೇಬಲ್ ಟ್ರಸ್ಟ್
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಕಿಚ್ಚ ಚಾರಿಟಬಲ್ ಟ್ರಸ್ಟ್ ಯುವಕರು ತಾಲೂಕು ಕಚೇರಿ ಮಂದೆ ತಾತ್ಕಾಲಿಕ ಶೆಡ್ ನಿರ್ಮಿಸಿ ಸಾರ್ವಜನಿಕರಿಗೆ ಮಣ್ಣಿನ ಮಡಿಕೆಯಲ್ಲಿ ಶುದ್ದ ಕುಡಿಯುವ ನೀರು ವಿತರಿಸುತ್ತಿದ್ದಾರೆ.
ಚಳ್ಳಕೆರೆ ನಗರದ ತಾಲೂಕು ಕಚೇರಿ ಮಂದೆ ತಾತ್ಕಾಲಿಕ ಶೆಡ್ ನಿರ್ಮಿಸಿ ಮಣ್ಣಿನ ಮಡಿಕೆಯಲ್ಲಿ ಶುದ್ದ ಕುಡಿವ ನೀರನ್ನು ವಿತರಿಸುತ್ತಿದ್ದಾರೆ. ಈ ತಂಪಾದ ನೀರು ವಿತರಿಸುವ ಕಾರ್ಯಕ್ಕೆ ಇಂದು ಶಾಸಕ ರಘುಮೂರ್ತಿ ಚಾಲನೆ ನೀಡಿ, ಯುವಕರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ನಗರದ ಮುಖ್ಯ ರಸ್ತೆಯಲ್ಲಿ ತಂಪು ನೀರು ವಿತರಿಸುವುದರಿಂದ ತಾಲೂಕು ಕಚೇರಿಗೆ ಬರುವವರು, ವಿದ್ಯಾರ್ಥಿಗಳು, ವ್ಯಾಪಾರಿಗಳು ಸೇರಿದಂತೆ ಎಲ್ಲರೂ ನೀರು ಕುಡಿದು ತಮ್ಮ ದಣಿವನ್ನು ನೀಗಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಕೊರೊನಾ ಹಿನ್ನೆಲೆ ಸಾಮಾಜಿಕ ಅಂತರ ಕಾಪಾಡಿಕೊಳ್ಳವ ಉದ್ದೇಶದಿಂದ ತಾತ್ಕಾಲಿಕ ಶೆಡ್ನಲ್ಲಿ ಎರಡು ಬಿದಿರಿನ ಕೊಳವೆಗಳನ್ನು ನಿರ್ಮಿಸಿ, ಕೊಳಗಳ ಮೂಲಕ ಒಳಗಿನಿಂದ ನೀರನ್ನು ಒದಗಿಸುತ್ತಿದ್ದಾರೆ.