ಕರ್ನಾಟಕ

karnataka

ETV Bharat / state

ಮಾಸ್ಕ್ ಧರಿಸದೇ ಬೇಕಾಬಿಟ್ಟಿ ಓಡಾಡುವ ಜನರಿಗೆ ಖಾಕಿ ಶಾಕ್ - Gandhi Circle of Chitradurga City

ಮಾಸ್ಕ್ ಹಾಕದೆ ರಸ್ತೆಗಿಳಿಯುತ್ತಿದ್ದ ವಾಹನ ಚಾಲಕರು ದಂಡ ಪಾವತಿಸಲು ಒಪ್ಪದ ಕಾರಣ ಅವರ ಹಾಗೂ ಪೊಲೀಸರ ಮಧ್ಯೆ ವಾಗ್ವಾದ ಏರ್ಪಡುತ್ತಿದ್ದ ಘಟನೆಗಳೂ ನಡೆದವು. ಆದರೆ, ಮಾಸ್ಕ್ ಹಾಕದವರ ಬಳಿ ಪೊಲೀಸರು ಮುಲಾಜಿಲ್ಲದೆ ದಂಡ ವಸೂಲಿ ಮಾಡಿದರು..

Khaki shocks people who walk without mask in Chitradurga
ಮಾಸ್ಕ್ ಧರಿಸದೇ ಬೆಕಾಬಿಟ್ಟಿ ಓಡಾಡುವ ಜನರಿಗೆ ಖಾಕಿ ಶಾಕ್....

By

Published : Oct 7, 2020, 5:38 PM IST

ಚಿತ್ರದುರ್ಗ :ಮಾಸ್ಕ್ ಧರಿಸದೆ ಇರುವವರಿಗೆ ದಂಡ ವಿಧಿಸಲು ಸರ್ಕಾರ ನಿರ್ಧಾರ‌ ಮಾಡಿದ ಬೆನ್ನಲ್ಲೇ ಇತ್ತ ಪೊಲೀಸರು ಕೂಡ ಕಾರ್ಯೋನ್ಮುಖರಾಗಿದ್ದಾರೆ.

ಮಾಸ್ಕ್ ಧರಿಸದೇ ಬೆಕಾಬಿಟ್ಟಿ ಓಡಾಡುವ ಜನರಿಗೆ ಖಾಕಿ ಶಾಕ್..

ಇಂದು ಚಿತ್ರದುರ್ಗ ನಗರದ ಗಾಂಧಿ ವೃತ್ತದಲ್ಲಿ ಮಾಸ್ಕ್‌ನ ಅರಿವೇ ಇಲ್ಲದೇ ಬೇಕಾಬಿಟ್ಟಿ ಓಡಾಡುತ್ತಿದ್ದ ಜನರಿಗೆ ಸಂಚಾರಿ ಪೊಲೀಸ್ ಇನ್ಸ್​ಪೆಕ್ಟರ್ ರೇವತಿ ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ.

ಮಾಸ್ಕ್ ಹಾಕದೆ ರಸ್ತೆಗಿಳಿಯುತ್ತಿದ್ದ ವಾಹನ ಚಾಲಕರು ದಂಡ ಪಾವತಿಸಲು ಒಪ್ಪದ ಕಾರಣ ಅವರ ಹಾಗೂ ಪೊಲೀಸರ ಮಧ್ಯೆ ವಾಗ್ವಾದ ಏರ್ಪಡುತ್ತಿದ್ದ ಘಟನೆಗಳೂ ನಡೆದವು. ಆದರೆ, ಮಾಸ್ಕ್ ಹಾಕದವರ ಬಳಿ ಪೊಲೀಸರು ಮುಲಾಜಿಲ್ಲದೆ ದಂಡ ವಸೂಲಿ ಮಾಡಿದರು.

ಸರ್ಕಾರ ದಂಡದ ಮೊತ್ತ ₹1000 ರಿಂದ ₹250ಗೆ ಇಳಿಕೆ‌ ಮಾಡಿದ ಬೆನ್ನಲ್ಲೇ ಪೊಲೀಸರು ಕೂಡ ಮಾಸ್ಕ್​ ಧರಿಸದವರಿಂದ 250 ರೂ. ದಂಡ ವಸೂಲಿ ಮಾಡಿ ಎಚ್ಚರಿಸಿದರು.

ABOUT THE AUTHOR

...view details