ಚಿತ್ರದುರ್ಗ: ಹತ್ತೊಂಭತ್ತು ತಿಂಗಳು ಮುಖ್ಯಮಂತ್ರಿಯಾದವರು ಆರ್ಎಸ್ಎಸ್, ಭಜರಂಗ ದಳ ಬ್ಯಾನ್ ಮಾಡ್ತೇನೆ ಎನ್ನುತ್ತಿದ್ದಾರೆ. ಅವರಿಗೆ ತಾಕತ್ ಇದ್ದರೆ ಸಂಘವನ್ನು ಬ್ಯಾನ್ ಮಾಡಲಿ ಎಂದು ಕಲ್ಲಡ್ಕ ಪ್ರಭಾಕರ್ ಮಾಜಿ ಸಿಎಂ ಕುಮಾರ್ ಸ್ವಾಮಿಯವರ ವಿರುದ್ದ ವಾಗ್ದಾಳಿ ನಡೆಸಿದರು.
ಚಿತ್ರದುರ್ಗದಲ್ಲಿರುವ ಮಾದರ ಚನ್ನಯ್ಯ ಗುರು ಪೀಠಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ದ್ವೇಷದ ರಾಜಕಾರಣ ಮಾಡುತ್ತಿದ್ದು, ಅದು ಅವರಿಗೆ ಶೋಭೆ ತರುವುದಿಲ್ಲ. ಆರ್ಎಸ್ಎಸ್ ಹಿಂದೂ ಸಮಾಜದ ರಕ್ಷಕ ಸಂಘವಾಗಿ ಕೆಲಸ ಮಾಡುತ್ತಿದ್ದು, ನಮ್ಮ ಮೇಲೆ ಮುಸ್ಲಿಂರು, ಕ್ರಿಶ್ಚಿಯನ್ನರು, ನಕ್ಸಲರು ಎಲ್ಲರೂ ಆಕ್ರಮಣ ಮಾಡುತ್ತಿದ್ದು, ರಕ್ಷಣೆ ಮಾಡುವವರು ಯಾರು ಎಂದು ಪ್ರಶ್ನಿಸಿದರು.