ಕರ್ನಾಟಕ

karnataka

ETV Bharat / state

ಕೋಟೆನಾಡಿನಲ್ಲಿ ರಂಗೇರುತ್ತಿರುವ ಲೋಕ ಸಮರ... ಕಾಂಗ್ರೆಸ್​ಗೆ ಜೆಡಿಎಸ್​ ಬೆಂಬಲ - undefined

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೈ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ಸೂಚಿಸುವ ಮೂಲಕ ಕೈ ತೆನೆ ಜಂಟಿಯಾಗಿ ಲೋಕಸಮರಕ್ಕೆ ಧುಮುಕಿದ್ದು, ಕಮಲ ಪಡೆಗೆ ಸೆಡ್ಡು ಹೊಡೆಯಲು ತಯಾರಿ ನಡೆಸಿದ್ದಾರೆ.

ಕಾಂಗ್ರೆಸ್​ಗೆ ಜೆಡಿಎಸ್​ ಬೆಂಬಲ

By

Published : Mar 22, 2019, 2:13 AM IST

ಚಿತ್ರದುರ್ಗ:ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆಯ ಕಾವು ಹೆಚ್ಚಾಗುತ್ತಿದೆ. ಆದರೆ ಕೋಟೆನಾಡಿನಲ್ಲಿ ಮಾತ್ರ ಮಂದಗತಿಯಲ್ಲಿ ಸಾಗುತ್ತಿದ್ದ ಲೋಕ ಸಮರ ಕಳೆದೆರಡು ದಿನಗಳಿಂದ ರಂಗೇರಿದೆ.

ಈಗಾಗಲೇ ಕೈ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ಸೂಚಿಸುವ ಮೂಲಕ ಕೈ ತೆನೆ ಜಂಟಿಯಾಗಿ ಲೋಕಸಮರಕ್ಕೆ ಧುಮುಕಿದ್ದು, ಕಾರ್ಯಕರ್ತರ ಸಭೆಯನ್ನು ಮಾಡುವ ಮೂಲಕ ಚುನಾವಣೆಯ ರಣಕಹಳೆಯನ್ನು ಮೊಳಗಿಸಿವೆ.ಕೈ ಭದ್ರ ಕೋಟೆ ಚಿತ್ರದುರ್ಗವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಸಾಕಷ್ಟು ಕಸರತ್ತು ನಡೆಸುತ್ತಿದೆ. ಜೆಡಿಎಸ್ ಕಚೇರಿಯಲ್ಲಿ ಕಾಂಗ್ರಸ್​ ಹಾಗೂ ಜೆಡಿಎಸ್ ಮುಖಂಡರು ಜಂಟಿಯಾಗಿ ಕಾರ್ಯಕರ್ತರ ಸಭೆ ಮಾಡುವ ಮೂಲಕ ಕಮಲ ಪಡೆಗೆ ಸೆಡ್ಡು ಹೊಡೆಯಲು ತಯಾರಿ ನಡೆಸಿದ್ದಾರೆ.

ಕಾಂಗ್ರೆಸ್​ಗೆ ಜೆಡಿಎಸ್​ ಬೆಂಬಲ

ಕೈ ಅಭ್ಯರ್ಥಿ ಸಂಸದ ಬಿಎನ್ ಚಂದ್ರಪ್ಪನವರು ಜಿಲ್ಲೆಯಲ್ಲಿ ಸಂಚರಿಸುತ್ತಿದ್ದು, ಲೋಕಸಭಾ ಚುನಾವಣೆ ರಂಗೇರ ತೊಡಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಆನೇಕಲ್ ನಾರಾಯಣ ಸ್ವಾಮಿಯವರ ಹೆಸರು ಕೇಳಿ ಬಂದ ಹಿನ್ನಲೆಯಲ್ಲಿ ಕಾಂಗ್ರೆಸ್​ನ್ನು ಬೆಂಬಲಿಸುವಂತೆ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಜೆಡಿಎಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಭೆ ನಡೆಸುವ ಮೂಲಕ ಮನವಿ ಮಾಡಿಕೊಂಡರು.

ಯಶೋಧರ, ಜೆಡಿಎಸ್, ಜಿಲ್ಲಾಧ್ಯಕ್ಷ ಇನ್ನೂ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ ಯಶೋಧರರವರು ಹಾಗೂ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶೀ ಬಿ .ಕಾಂತರಾಜ್​ರವರು ಕೂಡ ಕೈ ಅಭ್ಯರ್ಥಿ ಬಿಎನ್ ಚಂದ್ರಪ್ಪರನ್ನು ಮನವಿಗೆ ಸ್ಪಂದಿಸಿ ಬೆಂಬಲಿಸುವುದಾಗಿ ವೇದಿಕೆಯಲ್ಲಿ ತಿಳಿಸಿದರು. ಇನ್ನೂ ಜೆಡಿಎಸ್, ಕಾಂಗ್ರೆಸ್ ಮುಖಂಡರು ಸಭೆಯ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

For All Latest Updates

TAGGED:

ABOUT THE AUTHOR

...view details