ಕರ್ನಾಟಕ

karnataka

By

Published : Nov 6, 2020, 8:23 PM IST

Updated : Nov 6, 2020, 8:44 PM IST

ETV Bharat / state

ಮಳೆನೀರಿಗೆ ಆಹುತಿಯಾದ ಅರ್ಜಿಗಳು; ಮುಂದೇನು ಎಂದು ತೋಚದೆ ಕಂಗಾಲಾದ ಫಲಾನುಭವಿಗಳು..!

ಇತ್ತೀಚೆಗೆ ಬಿದ್ದ ಮಳೆಯ ಹೊಡೆತಕ್ಕೆ ಜಿಲ್ಲೆಯ ಜವಳಿ ಮತ್ತು ಕೈಮಗ್ಗ ಇಲಾಖೆಯ ಹಳೆಯ ಕಟ್ಟಡದ ಕೆಳಭಾಗದ ಕೊಠಡಿಯಲ್ಲಿದ್ದ ಕೆಲವು ಮಹತ್ವದ ಕಡತಗಳು ಮಳೆಗೆ ನಾಶವಾಗಿವೆ. ಇದರಿಂದ ಎಚ್ಚೆತ್ತುಕೊಂಡ ಇಲಾಖೆಯ ಅಧಿಕಾರಿಗಳು, ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದರ ನಡುವೆ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯತನದ ಕೆಲಸಕ್ಕೆ ಫಲಾನುಭವಿಗಳು ಹಿಡಿಶಾಪ ಹಾಕುತ್ತಿದ್ದಾರೆ.

Irresponsibility of Department of Textile and Handloom Department Officers: Beneficiaries are angry on dept
ಮಳೆಯಿಂದ ನೀರುಪಾಲಾದ ಕಡತಗಳು

ಚಿತ್ರದುರ್ಗ : ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಕೆಲವು ಮಹತ್ವದ ಕಡತಗಳು ಇತ್ತೀಚೆಗೆ ಸುರಿದ ಮಳೆಯಿಂದ ನೀರು ಪಾಲಾಗಿದ್ದು ಅರ್ಜಿ ಹಾಕಿ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಲೆಂದು ಕಾದು ಕುಳಿತಿದ್ದ ಜಿಲ್ಲೆಯ ಜನರು ಇದೀಗ ಚಿಂತೆಗೀಡಾಗಿದ್ದಾರೆ.

ಸರ್ಕಾರದ ಕೆಲವು ಯೋಜನೆಗಳಗಾಗಿ ಅರ್ಜಿ ಹಾಕಿದ್ದ ಕಡತಗಳು ಮೊನ್ನೆ ಬಿದ್ದ ಮಳೆಗೆ ನೆನೆದು ಮುದ್ದೆಯಾಗಿದ್ದು ಜಿಲ್ಲೆಯ ಜವಳಿ ಮತ್ತು ಕೈಮಗ್ಗ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಕೆಲಸಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಕೊರೊನಾ ಹೊಡೆತಕ್ಕೆ ತತ್ತರಿಸಿರುವ ನಿರುದ್ಯೋಗಿಗಳು ಹಲವು ಲೋನ್​ಗಳಿಗಾಗಿ ಜವಳಿ ಮತ್ತು ಕೈಮಗ್ಗ ಇಲಾಖೆಗೆ ಅರ್ಜಿ ಹಾಕಿದ್ದರು. ಆದರೆ ಇದೀಗ ಅವುಗಳೆಲ್ಲ ಮಳೆಯ ಹೊಡೆತಕ್ಕೆ ನೀರುಪಾಲಾಗಿದ್ದು ಅರ್ಜಿದಾರರ ಕನಸಿಗೆ ಜವಳಿ ಮತ್ತು ಕೈಮಗ್ಗ ಇಲಾಖೆ ತಣ್ಣೀರೆರಚಿದೆ. ಇಲಾಖೆಗೆ ಬಂದಿದ್ದ ಸಾವಿರಾರು ಅರ್ಜಿಗಳು ನೀರುಪಾಲಾಗಿದ್ದು, ಇದ್ರಲ್ಲಿ ಯಾರು ಯಾವ ಕಾರಣಕ್ಕೆ ಅರ್ಜಿ ಸಲ್ಲಿಸಿದ್ರು ಎಂಬ ಮಾಹಿತಿಯೂ ಸಿಗುತ್ತಿಲ್ಲ. ಇದರಿಂದ ಅಧಿಕಾರಿ ವರ್ಗ ಹೈರಾಣಾಗಿದೆ. ಆದ್ದರಿಂದ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಪ್ರತಿಯೊಬ್ಬ ಅರ್ಜಿದಾರನಿಗೂ ನ್ಯಾಯ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.

ಮಳೆಯಿಂದ ನೀರುಪಾಲಾದ ಕಡತಗಳು

ಮಳೆಯ ಹೊಡೆತಕ್ಕೆ ಇಲಾಖೆಯ ಹಳೆಯ ಕಟ್ಟಡದ ಕೆಳಭಾಗದ ಕೊಠಡಿಯಲ್ಲಿ ಇದ್ದ ಎಲ್ಲಾ ಅರ್ಜಿಗಳು ಮಳೆಗೆ ನಾಶವಾಗಿವೆ. ಇದರಿಂದ ಎಚ್ಚೆತ್ತುಕೊಂಡ ಇಲಾಖೆಯ ಅಧಿಕಾರಿಗಳು, ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 1990 ರಿಂದ ಇದೇ ಕಟ್ಟಡದಲ್ಲಿ ಕಚೇರಿ ಇದ್ದು ಇಷ್ಟು ವರ್ಷದಲ್ಲಿ ಎಂದೂ ಆಗದ ಸಮಸ್ಯೆ ಈಗ ಹೇಗೆ ಉದ್ಭವಿಸಿದೆ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

Last Updated : Nov 6, 2020, 8:44 PM IST

ABOUT THE AUTHOR

...view details